ಕರ್ನಾಟಕ

karnataka

ETV Bharat / state

ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ತಿಂಗಳಾದ್ರು ದುರಸ್ತಿ ಕಾಣದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ - ಕುಷ್ಟಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್​ ಯಂತ್ರ ಹಾಳು ಸುದ್ದಿ

ಸ್ಥಳೀಯ ತಾಲೂಕಾಸ್ಪತ್ರೆ ಸಂಬಂದಧಿಸಿದ ಕಂಪನಿಗೆ ಪತ್ರ ಬರೆದು ಕೈಚೆಲ್ಲಿ ಕುಳಿತಿದೆ. ಗರ್ಭಿಣಿಯರ ಪರೀಕ್ಷೆಗೆ ಮತ್ತು ಮತ್ತಿತರ ಕಾರಣಕ್ಕಾಗಿ ಅಗತ್ಯವಾಗಿರುವ ಸ್ಕ್ಯಾನಿಂಗ್ ಯಂತ್ರ ಸಕಾಲಿಕ ದುರಸ್ತಿ ಆಗದೇ ಇರುವ ಕಾರಣ ಖಾಸಗಿ ಸ್ಕ್ಯಾನಿಂಗ್ ಅವಲಂಬಿಸುವುದು ಅನಿವಾರ್ಯವಾಗಿದೆ.

Kushtagi Government Hospital
ದುರಸ್ಥಿ ಕಾಣದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಿಷನ್

By

Published : May 26, 2020, 3:20 PM IST

ಕುಷ್ಟಗಿ(ಕೊಪ್ಪಳ): ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿರುವ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್​ ಯಂತ್ರ ಎರಡು ತಿಂಗಳಿನಿಂದ ದುರಸ್ತಿ ಭಾಗ್ಯ ಕಂಡಿಲ್ಲ.

ಈ ಯಂತ್ರ ದುರಸ್ತಿ ಮಾಡಿಸಲು 1.10 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಅಲ್ಟ್ರಾಸೌಂಡ್ ಸ್ಕ್ಯಾನ್ ಪೂರೈಸಿದ ಕಂಪನಿ ಪತ್ರದಲ್ಲಿ ತಿಳಿಸಿದೆ. ಆದರೆ ಆರೋಗ್ಯ ಇಲಾಖೆ ಇಷ್ಟು ಮೊತ್ತದಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಲು ಸರ್ಕಾರದ ನಿಯಮಾವಳಿಯಂತೆ ಟೆಂಡರ್ ಕರೆಯಬೇಕಿದೆ. ಈ ಮೊತ್ತಕ್ಕಾಗಿ ಟೆಂಡರ್ ಆಹ್ವಾನಿಸಿ ದುರಸ್ತಿ ಆಗಬೇಕಾದರೆ ಇನ್ನೆಷ್ಟು ತಿಂಗಳು ಕಾಯಬೇಕೋ ಗೊತ್ತಿಲ್ಲ.

ದುರಸ್ತಿ ಕಾಣದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ

ಸ್ಥಳೀಯ ತಾಲೂಕಾ ಆಸ್ಪತ್ರೆ ಸಂಬಂದಿಸಿದ ಕಂಪನಿಗೆ ಪತ್ರ ಬರೆದು ಕೈಚೆಲ್ಲಿ ಕುಳಿತಿದೆ. ಗರ್ಭಿಣಿಯರ ಪರೀಕ್ಷೆಗೆ ಮತ್ತು ಮತ್ತಿತರ ಕಾರಣಕ್ಕಾಗಿ ಅಗತ್ಯವಾಗಿರುವ ಸ್ಕ್ಯಾನಿಂಗ್ ಯಂತ್ರ ಸಕಾಲಿಕ ದುರಸ್ತಿ ಆಗದೇ ಇರುವ ಕಾರಣ ಖಾಸಗಿ ಸ್ಕ್ಯಾನಿಂಗ್ ಅವಲಂಬಿಸುವುದು ಅನಿವಾರ್ಯವಾಗಿದೆ.

ಟ್ರೈವಿಟ್ರಾನ್ ಹೆಲ್ತ್ ಕೇರ್ ಪ್ರೈವೇಟ್​ ಲಿಮಿಟೆಡ್ ಕಂಪನಿ 2014ರಲ್ಲಿ ಈ ಸ್ಕ್ಯಾನಿಂಗ್ ಯಂತ್ರವನ್ನು ಪೂರೈಸಿತ್ತು. ಇಲ್ಲವಾದಲ್ಲಿ ಪ್ರತಿ ತಿಂಗಳ 9 ರಂದು ಪ್ರಧಾನಮಂತ್ರಿ ಮಾತೃ ಸುರಕ್ಷಾ ಯೋಜನೆಯಲ್ಲಿ ಗರ್ಭಿಣಿಯರು ಉಚಿತ ತಪಾಸಣೆ ಸೌಲಭ್ಯದಿಂದ ವಂಚಿತರಾಗುತ್ತಿರುವುದು ವಿಪರ್ಯಾಸವಾಗಿದ್ದು, ಆರೋಗ್ಯ ಸಚಿವರು ಕೂಡಲೇ ಇತ್ತ ಗಮನ ಹರಿಸಬೇಕಿದೆ.

ABOUT THE AUTHOR

...view details