ಕರ್ನಾಟಕ

karnataka

ETV Bharat / state

ಗಂಗಾವತಿ ಮಾರುಕಟ್ಟೆಯಲ್ಲಿ ತೈವಾನ್ ಹಣ್ಣುಗಳ ಹವಾ: ರಫ್ತಾಗದೇ ಸಂಕಷ್ಟದಲ್ಲಿದ್ದಾನೆ ಬೆಳೆಗಾರ - The Taiwanese fruit growers in the Gangavathi market is a hard-hitting grower

ಫಸಲೇನೋ ಬಂತು, ಆದ್ರೆ, ಕೊರೊನಾದ ಪರಿಣಾಮದಿಂದ ರಫ್ತು ಮಾಡಲಾಗದೇ ರೈತರು ಅಸಹಾಯಕ ಸ್ಥಿತಿಯಲ್ಲಿದ್ದಾರೆ.

gangavathi market
ಗಂಗಾವತಿ ಮಾರುಕಟ್ಟೆ

By

Published : Apr 23, 2020, 11:40 PM IST

ಗಂಗಾವತಿ: ತೋಟಗಾರಿಕಾ ಬೆಳೆಗಳಿಗೆ ಹೇಳಿ ಮಾಡಿಸಿದಂತಿರುವ ಕನಕಗಿರಿ ತಾಲೂಕಿನ ಫಲವತ್ತಾದ ಎರೆ ಭೂಮಿಯಲ್ಲಿ ತೈವಾನ್ ತಳಿಯ ಪೆರಲವನ್ನ ನಾಟಿ ಮಾಡಿದ್ದ ರೈತರು ಭರ್ಜರಿ ಫಸಲು ಪಡೆದಿದ್ದಾರೆ. ಫಸಲೇನೋ ಬಂತು, ಆದ್ರೆ, ಕೊರೊನಾದ ಪರಿಣಾಮದಿಂದ ರಫ್ತು ಮಾಡಲಾಗದೇ ರೈತರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಚೆನ್ನೈಗೆ ಕಳುಹಿಸಿ ಅಲ್ಲಿಂದ ಬೇರೆ ರಾಜ್ಯ, ರಾಷ್ಟ್ರಗಳಿಗೆ ಹೋಗಬೇಕಿದ್ದ ತೈವಾನ್ ಪೆರಲ ಇದೀಗ ಅನ್ಯಮಾರ್ಗವಿಲ್ಲದೇ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಗಂಗಾವತಿ ಮಾರುಕಟ್ಟೆಯಲ್ಲಿ ತೈವಾನ್ ಹಣ್ಣುಗಳ ಹವಾ

ಕೆ.ಜಿಗೆ 25 ರಿಂದ 40 ರೂಪಾಯಿ ಧಾರಣೆಗೆ ಗ್ರಾಹಕರಿಗೆ ಪೆರಲ/ಸೀಬೆ ದೊರೆಯುತ್ತಿತ್ತು. ಒಂದೊಂದು ಕಾಯಿ ಕನಿಷ್ಠ 400 ಗ್ರಾಂಗಿಂತ ಹೆಚ್ಚು ತೂಕವಿದೆ. ಕೊಯ್ದಾಗ ಒಳ ಭಾಗದಲ್ಲಿನ ತಿರುಳು ತಿಳಿಗೆಂಪಿನಲ್ಲಿರುವುದು ಈ ಹಣ್ಣಿನ ವಿಶೇಷ.

For All Latest Updates

ABOUT THE AUTHOR

...view details