ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಬೆಳಗ್ಗೆಯೇ ನೆತ್ತಿ ಸುಡುತ್ತಿದ್ದಾನೆ ಸೂರ್ಯ - The sun shines

ಇಂದು ಬೆಳಗ್ಗೆ 11 ಗಂಟೆ ವೇಳೆಗಾಗಲೇ ಬಿಸಿಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್​ ದಾಟಿತ್ತು. ಮಾರ್ಚ್ ಎರಡನೇ ವಾರಕ್ಕೆ ಬಿಸಿಲಿನ ಪ್ರಮಾಣ ಅಧಿಕವಾಗಿದೆ. ಇನ್ನು ಏಪ್ರಿಲ್, ಮೇ‌ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದರೂ ಅಚ್ಚರಿ ಪಡಬೇಕಾಗಿಲ್ಲ.

ಕೊಪ್ಪಳ
ಕೊಪ್ಪಳ

By

Published : Mar 13, 2021, 3:30 PM IST

ಕೊಪ್ಪಳ:ಈಗಗಾಲೇ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತಾಪ ದಿನೇ ದಿನೆ ಹೆಚ್ಚಾಗುತ್ತಿದೆ. ಬಿಸಿಲನಾಡು ಕೊಪ್ಪಳ ಜಿಲ್ಲೆಯಾದ್ಯಂತ ಭಾಸ್ಕರ ತನ್ನ ಪ್ರತಾಪ ತೋರಿಸುತ್ತಿದ್ದು, ಈಗಲೇ ಇಷ್ಟು ಬಿಸಿಲು ಇದ್ದರೆ ನಡು ಬೇಸಿಗೆಯಲ್ಲಿ ತಾಪ ಹೇಗಿರುತ್ತೆ ಎಂದು ಜನರು ಹೈರಾಣಾಗುತ್ತಿದ್ದಾರೆ.

ಇಂದು ಬೆಳಗ್ಗೆ 11 ಗಂಟೆ ವೇಳೆಗಾಗಲೇ ಬಿಸಿಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್​ ದಾಟಿತ್ತು. ಮಾರ್ಚ್ ಎರಡನೇ ವಾರಕ್ಕೆ ಬಿಸಿಲಿನ ಪ್ರಮಾಣ ಅಧಿಕವಾಗಿದೆ. ಇನ್ನು ಏಪ್ರಿಲ್, ಮೇ‌ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದರೂ ಅಚ್ಚರಿ ಪಡಬೇಕಾಗಿಲ್ಲ. ಜನರು ಬರುವ‌ ಏಪ್ರಿಲ್ ಹಾಗೂ ಮೇ ತಿಂಗಳಿನ ಸೂರ್ಯನ ಶಾಖವನ್ನು ನೆನೆದು ಸುಸ್ತಾಗುತ್ತಿದ್ದಾರೆ.

ಬೆಳಗ್ಗೆ 11 ಗಂಟೆಗೆ 30 ಡಿಗ್ರಿ ಸೆಲ್ಸಿಯಸ್

ಬಿಸಿಲಿನ ತಾಪ ಏರಿಕೆಯಾಗಿರುವುದರಿಂದ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಐಸ್​ಕ್ರೀಂ, ಸೋಡಾ, ಶರಬತ್ತು, ಕಬ್ಬಿನ ಜ್ಯೂಸ್, ಕಲ್ಲಂಗಡಿ ಹಣ್ಣು ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ABOUT THE AUTHOR

...view details