ಕರ್ನಾಟಕ

karnataka

ETV Bharat / state

ವ್ಯಾಪಾರಿಗಳಿಂದ ಹಣ ವಸೂಲಿ ಆರೋಪ.. ಗಂಗಾವತಿ ಪಿಎಸ್ಐ ವಿರುದ್ಧ ಎಸ್ಪಿಗೆ ದೂರು - The streetwear vendors complained to the SP against the Gangawati PSI

ಗಂಗಾವತಿ ನಗರ ಠಾಣೆಯಲ್ಲಿ ಕ್ರೈಂ ವಿಭಾಗದ ಮಹಿಳಾ ಪಿಎಸ್ಐ ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ವರ್ತಕರಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಗಂಗಾವತಿ ಮಹಿಳಾ ಪಿಎಸ್ಐ ವಿರುದ್ಧ ಎಸ್ಪಿಗೆ ದೂರು
ಗಂಗಾವತಿ ಮಹಿಳಾ ಪಿಎಸ್ಐ ವಿರುದ್ಧ ಎಸ್ಪಿಗೆ ದೂರು

By

Published : May 1, 2021, 7:28 AM IST

ಗಂಗಾವತಿ:ಇಲ್ಲಿನ ನಗರ ಠಾಣೆಯ ಕ್ರೈಂ ವಿಭಾಗದಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿರುವ ಶಹನಾಜ್ ಬೇಗಂ ಎಂಬ ಮಹಿಳಾ ಅಧಿಕಾರಿ ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ವರ್ತಕರಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಎಸ್ಪಿಗೆ ದೂರು ನೀಡಿದ್ದಾರೆ.

ಮಹಿಳಾ ಪಿಎಸ್ಐ ವಿರುದ್ಧ ಎಸ್ಪಿಗೆ ದೂರು

ಸಾರ್ವಜನಿಕರ ಪರವಾಗಿ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡ ಹೊಸಳ್ಳಿ ಶಂಕರಗೌಡ ಈ ಬಗ್ಗೆ ಅಧಿಕೃತ ದೂರು ನೀಡಿದ್ದಾರೆ. ಮಹಿಳಾ ಪಿಎಸ್ಐ, ಬೀದಿಬದಿ ವ್ಯಾಪಾರಿಗಳಿಗೆ, ಕಿರಾಣಿ ಅಂಗಡಿವರೆಗೆ ಧಮ್ಕಿ ಹಾಕಿ ವಸೂಲಿ ಮಾಡುತ್ತಿದ್ದಾರೆ. ಖರೀದಿಸಿದ ಸರಕುಗಳಿಗೆ ಹಣ ನೀಡದೇ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಆರೋಪಿಸಲಾಗಿದ್ದು, ಈ ಕುರಿತು ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಾಹನ ಚಾಲಕರಿಗೆ ದಂಡ ಹಾಕಿ ರಸೀದಿ ನೀಡದೇ ಕಳುಹಿಸುವುದು, ಕೇಳಿದರೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿಬಂದಿವೆ. ಒದ್ದು ಒಳಗೆ ಹಾಕ್ತೇನೆ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಮಹಿಳಾ ಪಿಎಸ್ಐ ವಿರುದ್ಧ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

For All Latest Updates

TAGGED:

ABOUT THE AUTHOR

...view details