ಕರ್ನಾಟಕ

karnataka

ETV Bharat / state

18 ಮಂದಿಯ ಎರಡನೇ ವರದಿಯೂ ನೆಗೆಟಿವ್: ಕೊಪ್ಪಳ ಡಿಸಿ  ಪಿ. ಸುನೀಲ್​​ಕುಮಾರ್ ಸ್ಪಷ್ಟನೆ

ನಿಲೋಗಲ್ ಗ್ರಾಮದ 18 ಜನರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಹಾಗೂ ರಕ್ತ ತಪಾಸಣೆಗೆ ಕಳಿಸಲಾಗಿತ್ತು. ಮೊದಲ ಬಾರಿ ಕಳಿಸಿದ್ದ ಸ್ಯಾಂಪಲ್​ಗಳ ರಿಪೋರ್ಟ್​ನಂತೆ,ಈಗ ಎರಡನೆಯ ರಿಪೋರ್ಟ್​ ಕೂಡಾ ನೆಗೆಟಿವ್​​ ಬಂದಿದೆ.

D  C   P. Sunil Kumar
ಜಿಲ್ಲಾಧಿಕಾರಿ ಪಿ. ಸುನೀಲ್​​ಕುಮಾರ್

By

Published : May 15, 2020, 12:39 PM IST

ಕೊಪ್ಪಳ:ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರು ಗ್ರಾಮದ ಪ್ರಾಥಮಿಕ ಸಂಪರ್ಕ ಹೊಂದಿದ್ದ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ 18 ಜನರ ಎರಡನೇ ಲ್ಯಾಬ್ ವರದಿ ನೆಗಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್​​ಕುಮಾರ್ ತಿಳಿಸಿದ್ದಾರೆ.

ನಿಲೋಗಲ್ ಗ್ರಾಮದ 18 ಜನರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಹಾಗೂ ರಕ್ತ ತಪಾಸಣೆಗೆ ಕಳಿಸಲಾಗಿತ್ತು. ಮೊದಲ ಬಾರಿ ಕಳಿಸಿದ್ದ ಸ್ಯಾಂಪಲ್ ಗಳ ರಿಪೋರ್ಟ್ ನೆಗಟಿವ್ ಬಂದಿದೆ. ಪುನಃ ಎರಡನೇ ಬಾರಿಗೆ ಇವರ ಸ್ಯಾಂಪಲ್ ಗಳನ್ನು ಲ್ಯಾಬ್ ಗೆ ಕಳಿಸಲಾಗಿತ್ತು. ಈಗಲೂ ಲ್ಯಾಬ್ ವರದಿ ನೆಗಟಿವ್ ಬಂದಿದೆ ಎಂದಿದ್ದಾರೆ.

ಹೀಗಾಗಿ, ಪ್ರೋಟೋಕಾಲ್ ಪ್ರಕಾರ ಅವರನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details