ಹೊಸಪೇಟೆ:ಹಾಡಹಗಲೇ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನೆತ್ತರು ಹರಿದಿತ್ತು. ವಕೀಲನನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣದಿಂದ ನೂತನ ವಿಜಯನಗರ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದರು. ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಕೋರ್ಟ್ ಆವರಣದಲ್ಲಿ ಕಾಂಗ್ರೆಸ್ ಮುಖಂಡ ಮತ್ತು ವಕೀಲರಾಗಿದ್ದ ತಾರಿಹಳ್ಳಿ ವೆಂಕಟೇಶ (48) ಅವರನ್ನು ಮಚ್ಚಿನಿಂದ ಕೊಚ್ಚಿ ವ್ಯಕ್ತಿವೋರ್ವ ಹತ್ಯೆ ಮಾಡಿದ್ದ.