ಕೊಪ್ಪಳ: ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ನಡೆದಿದೆ.
ಗಾಳಿ ಮಳೆಗೆ ಹಾರಿ ಹೋದ ಮನೆಯ ಮೇಲ್ಛಾವಣಿ: ಬೀದಿಗೆ ಬಿದ್ದ ಬಡ ಕುಟುಂಬ - ಬಿರುಗಾಳಿ ಸಹಿತ ಮಳೆ
ವಿರುಪಾಪುರ ಗ್ರಾಮದ ಬಾಳಮ್ಮ ದೇವರಮನಿ ಎಂಬುವರ ಮನೆಯ ಮೇಲ್ಛಾವಣಿ ಕಿತ್ತು ಹೋಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು, ಸಾಮಾಗ್ರಿಗಳು ಹಾಳಾಗಿವೆ. ವಿಪರೀತ ಗಾಳಿಗೆ ಕಂಗಾಲಾಗಿದ್ದ ಮನೆಯವರು ಪಕ್ಕದ ಮನೆಗೆ ತೆರಳಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ.
ಬಡ ಕುಟುಂಬ
ವಿರುಪಾಪುರ ಗ್ರಾಮದ ಬಾಳಮ್ಮ ದೇವರಮನಿ ಎಂಬುವರ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು, ಸಾಮಾಗ್ರಿಗಳು ಹಾಳಾಗಿವೆ. ವಿಪರೀತ ಗಾಳಿಗೆ ಕಂಗಾಲಾಗಿದ್ದ ಮನೆಯವರು ಪಕ್ಕದ ಮನೆಗೆ ತೆರಳಿದ್ದರಿಂದ ಯಾವುದೇ ಜೀವ ಹಾನಿಯಾಗಿಲ್ಲ.
ಲಾಕ್ಡೌನ್ನಿಂದಾಗಿ ಕೈಯಲ್ಲಿ ಕೆಲಸವಿಲ್ಲ. ಇದ್ದ ಮನೆಯ ಮೇಲ್ಛಾವಣಿಯೂ ಈಗ ಕಿತ್ತು ಹೋಗಿದೆ. ಇದರಿಂದ ನಮಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸರ್ಕಾರ ನಮಗೆ ನೆರವಾಗಬೇಕು ಎಂದು ಬಾಳಮ್ಮ ದೇವರಮನಿ ಮನವಿ ಮಾಡಿಕೊಂಡಿದ್ದಾರೆ.