ಗಂಗಾವತಿ (ಕೊಪ್ಪಳ):ಜಿಲ್ಲೆಯಲ್ಲಿಮೇ 12 ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ಮುನ್ಸೂಚನೆ ನೀಡಿದೆ.
ಸೋಮವಾರ (ಮೇ.10) ರಂದು ಕುಷ್ಟಗಿ ಹಾಗೂ ಯಲಬುರ್ಗಾದಲ್ಲಿ ಒಂದು ಮಿಲಿ ಮೀಟರ್ನಷ್ಟು ಮಳೆಯಾಗುವ ಸಾಧ್ಯತೆ ಇದೆ. ಮೇ. 11 ರಂದು ಗಂಗಾವತಿಯಲ್ಲಿ 0.5, ಕೊಪ್ಪಳದಲ್ಲಿ 6.1, ಕುಷ್ಟಗಿ 12.6 ಹಾಗೂ ಯಲಬುರ್ಗಾದಲ್ಲಿ 16.1 ಮಿ.ಮೀ ಮಳೆಯಾಗುವ ಸಂಭವವಿದೆ.