ಕುಷ್ಟಗಿ (ಕೊಪ್ಪಳ): ಕರ್ತವ್ಯದ ವೇಳೆ ಸಾರ್ವಜನಿಕರನ್ನು ಮುಟ್ಟಲೇ ಬೇಡಿ, ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಿ ಎಂದು ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್ಐ ಚಿತ್ತರಂಜನ್ ನಾಯಕ್ ಸೂಚಿಸಿದರು.
ಕರ್ತವ್ಯದ ವೇಳೆ ಸಾರ್ವಜನಿಕರನ್ನು ಮುಟ್ಟಬೇಡಿ : ಪೊಲೀಸರಿಗೆ ಪಿಎಸ್ಐ ಸೂಚನೆ - police do not touch the public
ಕರ್ತವ್ಯದ ವೇಳೆ ಸಾರ್ವಜನಿಕರನ್ನು ಮುಟ್ಟಲೇ ಬೇಡಿ, ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸಿ ಎಂದು ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್ಐ ಚಿತ್ತರಂಜನ್ ನಾಯಕ್ ಪೊಲೀಸರಿಗೆ ಸೂಚಿಸಿದರು.
ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದ ಅವರು, ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪೊಲೀಸರಿಗೂ ವ್ಯಾಪಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪೊಲೀಸರಿಗೆ ಕೊರೊನಾ ಬಂದಲ್ಲಿ ಠಾಣೆಯನ್ನೇ ಸೀಲ್ ಡೌನ್ ಮಾಡುವ ಸಂಭವನೀಯತೆಗಳಿವೆ ಎಂದು ಎಚ್ಚರಿಸಿದರು.
ಪೊಲೀಸರು ಕರ್ತವ್ಯ ನಿರ್ವಹಿಸಿದ ಬಳಿಕ ಮನೆಯಲ್ಲಿ ಶೂ ಕಳಚಿ, ಬಳಿಕ ಕೈ ತೊಳೆದು ಮುಖ ತೊಳೆಯಿರಿ. ಹಾಕಿದ ಶೂ ದೂರವೇ ಇಟ್ಟಿರಬೇಕು ಮಕ್ಕಳು, ಮನೆಯವರು ಮುಟ್ಟದಂತೆ ಜಾಗೃತಿ ವಹಿಸಿ. ಸ್ಯಾನಿಟೈಸರ್ ಬೇಕು ಎಂದೇನಿಲ್ಲ ಡಿಟರ್ಜಂಟ್ ಸೋಪಿನಿಂದ ಕೈ ಸ್ವಚ್ಚಗೊಳಿಸುವುದು ಕೂಡ ಒಳಿತೇ ಎಂದರು.