ಕರ್ನಾಟಕ

karnataka

ETV Bharat / state

ಭಕ್ತಿಯ ಪರಾಕಾಷ್ಠೆ... ಹರಕೆ ತೀರಿಸಲು ರಾಶಿ ರಾಶಿ ಮುಳ್ಳಿನ ಮೇಲೆ ಬೀಳುತ್ತಾರೆ ಭಕ್ತರು! - Devotees fall on a heap of thorns

ಭಕ್ತಿಯಲ್ಲಿ ಲೀನವಾದರೆ ಮುಳ್ಳು ಸಹ ಹೂವಿನಂತೆ ಭಾಸವಾಗುತ್ತದೆ ಎಂಬ ಮಾತಿದೆ. ಈ ಮಾತಿಗೆ ಒಪ್ಪುವ ರೀತಿಯಲ್ಲಿ ಇಲ್ಲೊಂದು ಆಚರಣೆ ನಡೆಯುತ್ತಿದೆ. ರಾಶಿ ರಾಶಿ ಮುಳ್ಳಿನ ಕಂಟಿಯಲ್ಲಿ ಮೇಲಿನಿಂದ ಬೀಳುವ ಆ ಪರಿ ನೋಡಿದರೆ ಮೈ ಜುಮ್ ಎನ್ನುತ್ತದೆ. ಕೊಪ್ಪಳದ ಗ್ರಾಮವೊಂದರಲ್ಲಿ ಭಕ್ತರ ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿದೆ.

ಭಕ್ತರು
ಭಕ್ತರು

By

Published : Dec 26, 2020, 8:41 PM IST

ಕೊಪ್ಪಳ: ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ನಡೆಯಿತು. ಮುಳ್ಳಿನ ಜಾತ್ರೆ ಎಂದು ಕರೆಯುವ ಈ ಜಾತ್ರೆಯಲ್ಲಿ ರಾಶಿ ರಾಶಿ ಮುಳ್ಳಿನ ರಾಶಿ ಮೇಲೆ ಭಕ್ತರು ಜಿಗಿಯುವುದು ಪ್ರಮುಖ ಆಕರ್ಷಣೆಯಾಗಿತ್ತು.

ಶ್ರೀ ಮಾರುತೇಶ್ವರನಲ್ಲಿ ಮನದ ಅಭೀಷ್ಠೆ ಈಡೇರಿಸುವಂತೆ ಪ್ರಾರ್ಥಿಸಿ ಬೇಡಿಕೊಳ್ಳುವ ಭಕ್ತರು, ತಮ್ಮ ಹರಕೆಯನ್ನು ಮುಳ್ಳಿನ ರಾಶಿ ಮೇಲೆ ಬೀಳುವ ಮೂಲಕ ತೀರಿಸುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಆಚರಣೆ ಮಾಡಲಾಗುತ್ತದೆ. ಬ್ಯಾಟಿ ಮರ ಎಂದು ಕರೆಯಲಾಗುವ ಕಾರಿಕಂಟಿಯನ್ನು ಊರ ಸೀಮೆಯಲ್ಲಿರುವ ದೇವಸ್ಥಾನದ ಬಳಿಯಿಂದ ಪೂಜೆ ಮಾಡಿ ಯಾವುದೇ ಆಯುಧ ಬಳಸದೆ ಕಲ್ಲಿನಿಂದ ಜಜ್ಜಿ ತರಲಾಗುತ್ತದೆ.

ಭಕ್ತಿಯ ಪರಾಕಾಷ್ಠೆ

ಬಳಿಕ ಈ ಮುಳ್ಳಿನ ರಾಶಿಯನ್ನು ಗ್ರಾಮದ ಮುಂದೆ ಗುಡ್ಡೆ ಹಾಕಿ ಅದರ ಮೇಲೆ ಭಕ್ತರು ಹಾರುವುದನ್ನು ಆರಂಭಿಸುತ್ತಾರೆ. ಇದು ಈ ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ. ಹೀಗೆ ಮುಳ್ಳಿನ ರಾಶಿಯಲ್ಲಿ ಹಾರುವ ಭಕ್ತರು ಅಂದು ನೀರು ಮತ್ತು ಹಾಲನ್ನು ಮಾತ್ರ ಸೇವಿಸಬೇಕು ಎಂಬ ನಿಯಮವಿದೆ. ಅಲ್ಲದೆ ಕಾರ್ತಿಕ ಮಾಸದಿಂದ ಶ್ರೀ ಮಾರುತಿ ದೇವರ ಜಾತ್ರೆ ಮುಗಿಯುವವರೆಗೂ ಮಾಂಸಾಹಾರ ಅಡುಗೆ ಈ ಗ್ರಾಮದಲ್ಲಿ ನಿಷಿದ್ಧ ಎನ್ನುತ್ತಾರೆ ಗ್ರಾಮಸ್ಥರು.

ABOUT THE AUTHOR

...view details