ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗುಂದಿ ತುಂಗಭದ್ರಾ ನಡುಗಡ್ಡೆಯಲ್ಲಿರುವ ನವ ವೃಂದಾವನಲ್ಲಿ ದುಷ್ಕರ್ಮಿಗಳು ವ್ಯಾಸರಾಜ ಯತಿಗಳ ವೃಂದಾವನ ಧ್ವಂಸಗೊಳಿಸಿದ್ದಾರೆ.
ಒಂಭತ್ತು ಯತಿಗಳ ವೃಂದಾವನವಿರುವ ಈ ಧಾರ್ಮಿಕ ಸ್ಥಳದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಗುರುವಾಗಿದ್ದ ವ್ಯಾಸರಾಜ ಯತಿಗಳ ವೃಂದಾವನ ವನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾರೆ.