ಕರ್ನಾಟಕ

karnataka

ETV Bharat / state

ಎಂಥಾ ಉದಾತ್ತತೆ.. ಮಕ್ಕಳ ಮದುವೆಗೆಂದು ಕಾರ್ಮಿಕರಿಗೆ ಚಿನ್ನದ ಉಂಗುರ ಕೊಟ್ಟ ಸಾ ಮಿಲ್‌ ಮಾಲೀಕ!! - kushtagi

ಈ ಕಾರ್ಮಿಕರು ನನಗೆ‌ ಕೋಟಿ ರೂ. ಸಮಾನ. ನಮ್ಮ ಮಕ್ಕಳ ಮದುವೆ ಕಾರ್ಯಕ್ರಮದಲ್ಲಿ ಅವರನ್ನು ಸಂಭ್ರಮದಿಂದ ಸನ್ಮಾನಿಸುವ ಕರ್ತವ್ಯ ನನ್ನದಾಗಿತ್ತು, ಅದನ್ನು ನಿಭಾಯಿಸಿರುವೆ..

kushtagi
ಚಿನ್ನದ ಉಂಗುರು ತೊಡಿಸಿ ಸಂಭ್ರಮಿಸಿದ ಮಾಲೀಕ

By

Published : Jan 5, 2021, 7:49 AM IST

ಕುಷ್ಟಗಿ (ಕೊಪ್ಪಳ): ಕಳೆದ 25 ವರ್ಷಗಳಿಂದ ಹೆಗಲಿಗೆ ಹೆಗಲುಕೊಟ್ಟು ದುಡಿದ ಕಾರ್ಮಿಕ, ಶ್ರಮಿಕರಿಗೆ ಕುಷ್ಟಗಿ ಮಹಾವೀರ ಸಾ ಮಿಲ್ ಮಾಲೀಕ ಶಾಂತರಾಜ್ ಗೋಗಿ ಅವರು, ತಮ್ಮ ಮಕ್ಕಳ ಮದುವೆ ಸಮಾರಂಭದ ಹಿನ್ನೆಲೆ ಕಾರ್ಮಿಕ ದಂಪತಿಗೆ ಒಂದೂವರೆ ತೊಲ ಚಿನ್ನದ‌ ಉಂಗುರ ತೊಡಿಸಿ ಗೌರವಿಸಿ ಸಂಭ್ರಮಿಸಿದರು.

ಜ.6ರಂದು ನೆರವೇರಲಿರುವ ಶಾಂತರಾಜ್-ಅನಿತಾ ಗೋಗಿ ಪುತ್ರರಾದ ಶ್ರೇಣಿಕ್, ಸುಮಿತ್ ಅವರ ಮದುವೆ ಸಮಾರಂಭದ ಪ್ರಯುಕ್ತ ಜ.4ರಂದು ಸಂಜೆ ಮಹಾವೀರ ಸಾ ಮಿಲ್ ಕಾರ್ಮಿಕರಾದ ಯಮನೂರಸಾಬ್- ಖಾದರಬಿ, ಗ್ಯಾನಪ್ಪ ಪಾಟೀಲ- ರೇಣುಕಾ, ದೇವಪ್ಪ ಮೇಸ್ತ್ರಿ- ಹನುಮವ್ವ, ರಹೀಮಾಮಸಾಬ್ ಬಸಾಪೂರ- ಖಾಸೀಂಬಿ ಈ ನಾಲ್ವರು ಕಾರ್ಮಿಕ ದಂಪತಿಗೆ ಮಹಾವೀರ ಸಾ ಮಿಲ್ ಮಾಲೀಕ ಶಾಂತರಾಜ್ ಗೋಗಿ-ಅನಿತಾ ಕುಟುಂಬದವರೆಲ್ಲರೂ ಸೇರಿ ಪೇಟಾದೊಂದಿಗೆ ಸನ್ಮಾನಿಸಿ, ಹೊಸ ಬಟ್ಟೆ ನೀಡುವ ಜೊತೆಯಲ್ಲಿ ಕಾರ್ಮಿಕರಿಗೆ ತಲಾ ಒಂದೂವರೆ ತೊಲ ಚಿನ್ನದ ಉಂಗುರು ತೊಡಿಸಿ ಸಂಭ್ರಮಿಸಿದರು.

ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಶಾಂತರಾಜ್ ಗೋಗಿ ಅವರು, ನಮ್ಮ ಕಾರ್ಮಿಕರು ನಮ್ಮ ಕುಟುಂಬದ ಭಾಗ, ಅವರ ಕೆಲಸದಿಂದ ಲಕ್ಷಾಂತರ ಆದಾಯ‌ ಸಾಧ್ಯವಾಗಿದೆ. ಅವರಿಲ್ಲದೇ ಉದ್ಯಮ ನಡೆಸುವುದು ಕಷ್ಟಸಾಧ್ಯವಿದೆ. ಲಾಕ್​ಡೌನ್ ಸಂದರ್ಭದಲ್ಲಿ ಕಾರ್ಮಿಕರು ಕೈ ಕೊಡದೇ ನನ್ನೊಂದಿಗೆ ಲಾಭ ನಷ್ಟ, ಸುಖ ದುಃಖದಲ್ಲಿ ಸಮಾಭಾಗಿಗಳಾಗಿ ಕೆಲಸ ನಿರ್ವಹಿಸಿದ್ದಾರೆ.

ಈ ಕಾರ್ಮಿಕರು ನನಗೆ‌ ಕೋಟಿ ರೂ. ಸಮಾನ. ನಮ್ಮ ಮಕ್ಕಳ ಮದುವೆ ಕಾರ್ಯಕ್ರಮದಲ್ಲಿ ಅವರನ್ನು ಸಂಭ್ರಮದಿಂದ ಸನ್ಮಾನಿಸುವ ಕರ್ತವ್ಯ ನನ್ನದಾಗಿತ್ತು, ಅದನ್ನು ನಿಭಾಯಿಸಿರುವುದಾಗಿ ಹೇಳಿಕೊಂಡರು. ಈ ವೇಳೆ ರಬಕವಿ ಹಜಾರೆ ಟೆಕ್ಸ್​​ಟೈಲ್ ಪ್ರಭಾವತಿ, ಗಣಪತಿ ರಾವ್ ಹಜಾರೆ ಮತ್ತಿತರರು ಹಾಜರಿದ್ದರು.

ABOUT THE AUTHOR

...view details