ಕೊಪ್ಪಳ :ಕೃಷಿ ಸಚಿವ ಬಿ ಸಿ ಪಾಟೀಲ್ ಅವರನ್ನು ಸ್ವಾಗತಿಸಲು ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಬಳಿ ನಿಂತಿದ್ದ ಅಧಿಕಾರಿಗಳಿಗೆ ದಿಢೀರ್ ಆಗಿ ಹೆಜ್ಜೇನುಗಳು ಪ್ರತ್ಯಕ್ಷವಾಗಿ ಕೆಲಕಾಲ ಕಚೇರಿ ಸುತ್ತಮುತ್ತಾ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕಾಯ್ದಿದ್ದು ಉಸ್ತುವಾರಿ ಸಚಿವರಿಗಾಗಿ, ಬಂದು ಕಚ್ಚಿದ್ದು ಹೆಜ್ಜೇನುಗಳು..
ಇನ್ನೇನು ಸಚಿವ ಬಿ ಸಿ ಪಾಟೀಲ್ ಬರುತ್ತಾರೆ ಎನ್ನುತ್ತಿರುವಾಗಲೇ ಹೆಜ್ಜೇನುಗಳು ದಿಢೀರ್ ಪ್ರತ್ಯಕ್ಷವಾದವು. ಅಲ್ಲಿದ್ದ ಕೆಲವರಿಗೆ ಜೇನುಹುಳುಗಳು ಕಚ್ಚಿದವು. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣವಿತ್ತು..
ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ ಸಿ ಪಾಟೀಲ್ ಅವರನ್ನು ಸ್ವಾಗತಿಸಲು ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಬಳಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತ್ ಸಿಇಒ ರಘುನಂದನಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠ ಟಿ. ಶ್ರೀಧರ್ ಸೇರಿ ಹಲವರು ಅಧಿಕಾರಿಗಳು ನಿಂತಿದ್ದರು.
ಇನ್ನೇನು ಸಚಿವ ಬಿ ಸಿ ಪಾಟೀಲ್ ಬರುತ್ತಾರೆ ಎನ್ನುತ್ತಿರುವಾಗಲೇ ಹೆಜ್ಜೇನುಗಳು ದಿಢೀರ್ ಪ್ರತ್ಯಕ್ಷವಾದವು. ಅಲ್ಲಿದ್ದ ಕೆಲವರಿಗೆ ಜೇನುಹುಳುಗಳು ಕಚ್ಚಿದವು. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣವಿತ್ತು. ಹೀಗಾಗಿ, ಬಿ ಸಿ ಪಾಟೀಲ್ ಅವರನ್ನು ಜಿಲ್ಲಾ ಪಂಚಾಯತ್ ಕಾರ್ಯಾಲಯದ ದ್ವಾರದಲ್ಲಿ ಸ್ವಾಗತಿಸಲಾಯಿತು.