ಗಂಗಾವತಿ: ತಾಲೂಕಿನ ಆನೆಗೊಂದಿ ರಸ್ತೆಯಲ್ಲಿರುವ ಬೆತೆಲ್ ಆಂಗ್ಲ ಮಾಧ್ಯಮ ಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ನೂರಾರು ವಿದ್ಯಾರ್ಥಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಗುಲಾಬಿ ಹೂವು ನೀಡಿ ಶುಭ ಹಾರೈಸಿದರು.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಶುಭ ಹಾರೈಸಿದ ಶಾಸಕ - Gangavathi mla paranna munavalli news
ಮಕ್ಕಳಲ್ಲಿ ಯಾವುದೇ ಭಯ, ಆತಂಕ ಬೇಡ. ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಲ್ಲಿ ಸಹಜವಾಗಿ ಆತಂಕ ಇರುತ್ತದೆ. ಆದರೆ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಎಲ್ಲಾ ಸೂಕ್ತ ಭದ್ರತೆ ಕೈಗೊಂಡಿದೆ..
Munavalli
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳಲ್ಲಿ ಉತ್ಸಾಹ ಮೂಡಿಸಿ, ಆತಂಕ ದೂರ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ನಗರದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮಕ್ಕಳಲ್ಲಿ ಯಾವುದೇ ಭಯ, ಆತಂಕ ಬೇಡ. ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಲ್ಲಿ ಸಹಜವಾಗಿ ಆತಂಕ ಇರುತ್ತದೆ. ಆದರೆ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಎಲ್ಲಾ ಸೂಕ್ತ ಭದ್ರತೆ ಕೈಗೊಂಡಿದೆ. ಯಾವುದೇ ಚಿಂತೆ ಮಾಡದೆ ಪರೀಕ್ಷೆ ಬರೆಯಿರಿ ಎಂದು ಹುರಿದುಂಬಿಸಿದರು.