ಕೊಪ್ಪಳ :ಬಳ್ಳಾರಿ ಲ್ಯಾಬ್ನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದ ನಗರದ 112 ಗಂಟಲು ದ್ರವ ಮಾದರಿಯ ಲ್ಯಾಬ್ ವರದಿ ಬರುವುದು ತಡವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ತಿಳಿಸಿದ್ದಾರೆ.
ಲ್ಯಾಬ್ ರಿಪೋರ್ಟ್ ತಡವಾಗಿ ಬರುವ ಸಾಧ್ಯತೆ ಇದೆ.. ಜಿಲ್ಲಾಧಿಕಾರಿ ಪಿ ಸುನೀಲ್‌ಕುಮಾರ್
ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ 18 ಜನರು ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರು ಗ್ರಾಮಕ್ಕೆ ಹೋಗಿ ಬಂದಿದ್ದಾರೆ. ಈ ಜನರ ಗಂಟಲು ದ್ರವ ಸ್ಯಾಂಪಲ್ಗಳನ್ನು ಸಹ ಲ್ಯಾಬ್ಗೆ ಕಳಿಸಿರುವುದರಿಂದ ಲ್ಯಾಬ್ ರಿಪೋರ್ಟ್ ಏನು ಬರುತ್ತೆ? ಯಾವಾಗ ಬರುತ್ತೆ ಎಂದು ಸಹ ಜನರು ಆತಂಕದಿಂದ ಕಾಯುತ್ತಿದ್ದಾರೆ.
ಜಿಲ್ಲೆಯ ಕೊರೊನಾ ಶಂಕಿತರ ಗಂಟಲು ದ್ರವ ಮಾದರಿಗಳನ್ನು ಬಳ್ಳಾರಿಯ ವಿಮ್ಸ್ನ ಕೋವಿಡ್-19 ಲ್ಯಾಬ್ಗೆ ಕಳಿಸಲಾಗುತ್ತಿತ್ತು. ಅಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸ್ಯಾಂಪಲ್ಗಳ ಟೆಸ್ಟ್ ಸ್ಥಗಿತಗೊಂಡಿದೆ. ಹೀಗಾಗಿ ಜಿಲ್ಲೆಯ ಬಾಕಿ 112 ಸ್ಯಾಂಪಲ್ನ ಬೆಂಗಳೂರು ಲ್ಯಾಬ್ಗೆ ರವಾನಿಸಲಾಗಿದೆ. ಇದರಿಂದಾಗಿ ವರದಿಗಳು ತಡವಾಗಿ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ತಿಳಿಸಿದ್ದಾರೆ.