ಕರ್ನಾಟಕ

karnataka

ETV Bharat / state

ಕುಷ್ಟಗಿಯಲ್ಲಿ ಇದುವರೆಗೆ 137 ಜನರಿಗೆ ಸಾಂಸ್ಥಿಕ ಕ್ವಾರಂಟೈನ್​​ - Koppal corona infected

ಕೊಪ್ಪಳ ಜಿಲ್ಲಾದ್ಯಂತ ಹೊರರಾಜ್ಯದಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ಇನ್ನು ಕುಷ್ಟಗಿ ಒಂದರಲ್ಲೇ 137 ಜನರನ್ನು ವಿವಿಧೆಡೆ ಕ್ವಾರಂಟೈನ್ ಮಾಡಲಾಗಿದ್ದು, ಅವರಿಗೆಲ್ಲ ವೈದ್ಯಕೀಯ ಚಿಕಿತ್ಸೆಯೂ ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

The institutional quarantine for 137 people in Kushtagi so far
ಕುಷ್ಟಗಿಯಲ್ಲಿ ಇದುವರೆಗೆ 137 ಜನರಿಗೆ ಸಾಂಸ್ಥಿಕ ಕ್ವಾರಂಟೈನ್​​

By

Published : May 16, 2020, 10:12 PM IST

ಕುಷ್ಟಗಿ (ಕೊಪ್ಪಳ):ಅಂತರರಾಜ್ಯದಿಂದ ತಮ್ಮ ಸ್ವಗ್ರಾಮಗಳಿಗೆ ಮರಳುವವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡುವ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ವಸತಿ ನಿಲಯಗಳು ತಾಲೂಕು ಆಡಳಿತದ ಅಧೀನದಲ್ಲಿವೆ. ಎಲ್ಲ ವಸತಿ ನಿಲಯಗಳನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿಯವರೆಗೂ 137 ಜನ ಗೋವಾ, ಮಹಾರಾಷ್ಟ್ರ, ಆಂಧ್ರ, ಜಾರ್ಖಂಡ್​​​, ಗುಜರಾತ್​ನಿಂದ ಬಂದವರಾಗಿದ್ದಾರೆ.

ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ವಿದ್ಯಾರ್ಥಿ ನಿಲಯದಲ್ಲಿ 69 ಜನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಮಹಾರಾಷ್ಟ್ರದಿಂದ 58, ಆಂಧ್ರ ಪ್ರದೇಶದಿಂದ 5, ಗುಜರಾತ್​​ನಿಂದ 2, ಹಾಗೂ ಜಾರ್ಖಂಡ್​​ ಮೂಲದ ಓರ್ವ ಸೇರಿದಂತೆ ಒಟ್ಟು 66 ಜನ ಇದ್ದಾರೆ. ಇವರಿಗೆ ವಾಸ್ತವ್ಯ, ಊಟೋಪಚಾರ, ವೈದ್ಯಕೀಯ ತಪಾಸಣೆ ನಿರಂತರವಾಗಿ ನಡೆದಿರುವುದಾಗಿ ವಾರ್ಡನ್ ದ್ಯಾಮಣ್ಣ ಕರೇಕಲ್ ತಿಳಿಸಿದ್ದಾರೆ.

ಪಕ್ಕದ ಮೆಟ್ರಿಕ್ ನಂತರ ವಿದ್ಯಾರ್ಥಿ ವಸತಿ ನಿಲಯದಲ್ಲಿ ಮಹಾರಾಷ್ಟ್ರದಿಂದ ಬಂದ 59 ಜನ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ನಿಡಶೇಸಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 7, ಕಾಟಾಪೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 5 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಇವರೆಲ್ಲರೂ ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ವಲಸೆ ಹೋದವರಾಗಿದ್ದು, ಕೋವಿಡ್ ನಿಯಮಾವಳಿ ಪ್ರಕಾರ 14 ದಿನಗಳ ಕ್ವಾರಂಟೈನ್​​ ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details