ಗಂಗಾವತಿ:ಪ್ರಾದೇಶಿಕ ಅಸಮಾನತೆ ನೀಗಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ(ಹೈದ್ರಬಾದ್ ಕರ್ನಾಟಕ)ಪ್ರದೇಶದಲ್ಲಿ ಸಂವಿಧಾನ ಬದ್ಧವಾಗಿ ಸಿಕ್ಕಿರುವ 371ನೇ(ಜೆ) ಕಲಂ ಸಮರ್ಪಕ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಪ್ರತಿಭಟನೆ ನಡೆಸಿದರು.
371(ಜೆ) ಕಲಂ ಸಮರ್ಪಕ ಜಾರಿಗೆ ಒತ್ತಾಯ.. ಖಾಸಗಿ ಶಿಕ್ಷಕರಿಂದ ಪ್ರತಿಭಟನೆ - ಖಾಸಗಿ ಶಿಕ್ಷಕರ ಪ್ರತಿಭಟನೆ ಗಂಗಾವತಿ
371(ಜೆ) ಕಲಂ ಸಮರ್ಪಕ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ಗೆ ಮನವಿ
ನಗರದ ಬಿಇಒ ಕಚೇರಿಯ ಮುಂದೆ ಸೇರಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಸಾಂಕೇತಿಕವಾಗಿ ಸಭೆ ನಡೆಸಿ ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ಒಕ್ಕೂಟದ ಅಧ್ಯಕ್ಷ ಜಿ. ಶ್ರೀಧರ ಕೇಸರಹಟ್ಟಿ ನೇತೃತ್ವದಲ್ಲಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಹೈ-ಕ ಭಾಗದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉತ್ತೇಜಿಸಲು ಪ್ರೋತ್ಸಾಹ ನಿಧಿ ಘೋಷಣೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ವೃದ್ಧಿಸಲು ಸಂಸದರು, ಶಾಸಕರು ಅನುದಾನ ನೀಡಲು ಅವಕಾಶ ಕಲ್ಪಿಸಬೇಕು ಎಂಬುದೂ ಸೇರಿ ಹತ್ತಕ್ಕೂ ಹೆಚ್ಚು ಬೇಡಿಕೆಯನ್ನು ಖಾಸಗಿ ಒಕ್ಕೂಟದ ಮುಖಂಡರು ಸರ್ಕಾರಕ್ಕೆ ಸಲ್ಲಿಸಿದರು.