ಗಂಗಾವತಿ :ದೇಶದಲ್ಲಿನ ಸಾಕಷ್ಟು ಕ್ಷೇತ್ರ, ಜಿಲ್ಲೆ ಹಾಗೂ ಮಹಾನಗರಗಳನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ಜನರ ಒತ್ತಾಸೆಯಂತೆ ಬದಲಿಸಲಾಗುತ್ತಿದೆ. ಹೀಗಾಗಿ ಕೊಪ್ಪಳ ಕ್ಷೇತ್ರದ ಹೆಸರನ್ನೂ ಸಹ ಬದಲಿಸಬೇಕು ಎಂದು ಒತ್ತಾಯಿಸಿ 4ನೇ ತರಗತಿಯ ಬಾಲಕಿಯೋರ್ವಳು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾಳೆ.
ಕೊಪ್ಪಳ ಕ್ಷೇತ್ರವನ್ನು ಕಿಷ್ಕಿಂಧೆಯಾಗಿ ಮರು ನಾಮಕರಣ ಮಾಡುವಂತೆ ಮೋದಿಗೆ ಪತ್ರ ಬರೆದ ಬಾಲಕಿ - Kishkindha
ತುಂಗಭದ್ರಾ ನದಿಯ ಆಚೆ ಮತ್ತು ಈಚೆ ದಡದಲ್ಲಿರುವ ಹಂಪಿ ಮತ್ತು ಆನೆಗೊಂದಿಯ ಅರಸರ ಸಾಧನೆ ದೇಶದ ಐತಿಹಾಸಿಕ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಿದೆ..
ಗಂಗಾವತಿಯ ಕೇಂದ್ರೀಯ ವಿದ್ಯಾಲಯದಲ್ಲಿ 4ನೇ ತರಗತಿ ಓದುತ್ತಿರುವ ಸಿಂಧು.ಡಿ ಎಂಬ ಹತ್ತು ವರ್ಷದ ಬಾಲಕಿ, ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಕಿಷ್ಕಿಂದಾ ಕ್ಷೇತ್ರ ಎಂದು ಪರಿಗಣಿಸಿ, ಹೆಸರು ಬದಲಿಸಬೇಕು ಎಂದು ಮನವಿ ಮಾಡಿದ್ದಾಳೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ಪಾಟೀಲ್ ಹಾಗೂ ಜಿಲ್ಲಾಧಿಕಾರಿ ಸುರಾಳ್ಕರ್ ವಿಕಾಸ್ ಕಿಶೋರ್ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಸಂಸದ ಕರಡಿ ಸಂಗಣ್ಣ ಅವರಿಗೆ ಮನವಿ ನೀಡಿ, ನಂತರ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಗೂ ಸಹ ಈ ಬಾಲಕಿ ಪತ್ರ ಬರೆದಿದ್ದಾಳೆ.
ತುಂಗಭದ್ರಾ ನದಿಯ ಆಚೆ ಮತ್ತು ಈಚೆ ದಡದಲ್ಲಿರುವ ಹಂಪಿ ಮತ್ತು ಆನೆಗೊಂದಿಯ ಅರಸರ ಸಾಧನೆ ದೇಶದ ಐತಿಹಾಸಿಕ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಿದೆ. ಅಲ್ಲದೇ ಅತ್ಯಂತ ಪ್ರಾಚೀನ, ಪೌರಾಣಿಕತೆ ಇರುವ ಈ ಕ್ಷೇತ್ರಕ್ಕೆ ಹೆಸರು ಬದಲಿಸುವಂತೆ ಬಾಲಕಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.