ಕುಷ್ಟಗಿ(ಕೊಪ್ಪಳ) :ಕೊರೊನಾ ವೈರಸ್ ನಿಯಂತ್ರಣದಲ್ಲಿಡಲು ಸಂಪೂರ್ಣ ರಾಜ್ಯವನ್ನು ಲಾಕ್‌ಡೌನ್ ಮಾಡುವುದು ಅನಿವಾರ್ಯವೆನಿಸಿದೆ. ಲಾಕ್‌ಡೌನ್ ಮಾಡುವುದಾದ್ರೆ ಇಡೀ ರಾಜ್ಯವನ್ನು ಮಾಡಿ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಕೊರೊನಾ ನಿಯಂತ್ರಣಕ್ಕೆ ಸಂಪೂರ್ಣ ರಾಜ್ಯ ಲಾಕ್‌ಡೌನ್ ಮಾಡಬೇಕು : ಶಾಸಕ ಬಯ್ಯಾಪುರ - Corona control
ಅಂತಾರಾಜ್ಯ ಸರಕು ಸಾಗಾಣಿಕೆ ಹೊರತು ಪಡಿಸಿ, ಮಾನವ ಸಂಚಾರ ನಿಯಂತ್ರಿಸಬೇಕು. ಈ ಹಿಂದೆ ಎರಡು ತಿಂಗಳ ನಿರ್ಬಂಧಕ್ಕಿಂತಲೂ, ಕಠಿಣ ನಿರ್ಧಾರ ಕೈಗೊಂಡ್ರೆ ಮಾತ್ರ ಕೋವಿಡ್-19 ಹರಡುವಿಕೆ ನಿಯಂತ್ರಿಸಬಹುದಾಗಿದೆ..
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೊರೊನಾ ವೈರಸ್ ನಿಯಂತ್ರಿಸಲು 10 ರಿಂದ 12 ಜಿಲ್ಲೆಗಳ ಲಾಕ್‌ಡೌನ್ ಮಾಡುವ ಬದಲು ಇಡೀ ರಾಜ್ಯವನ್ನು ಲಾಕ್‌ಡೌನ್ ಮಾಡುವುದು ಅಗತ್ಯವಾಗಿದೆ. ಅಂತಾರಾಜ್ಯ ಸರಕು ಸಾಗಾಣಿಕೆ ಹೊರತು ಪಡಿಸಿ, ಮಾನವ ಸಂಚಾರ ನಿಯಂತ್ರಿಸಬೇಕು. ಈ ಹಿಂದೆ ಎರಡು ತಿಂಗಳ ನಿರ್ಬಂಧಕ್ಕಿಂತಲೂ, ಕಠಿಣ ನಿರ್ಧಾರ ಕೈಗೊಂಡ್ರೆ ಮಾತ್ರ ಕೋವಿಡ್-19 ಹರಡುವಿಕೆ ನಿಯಂತ್ರಿಸಬಹುದಾಗಿದೆ ಎಂದರು.
ಕೇವಲ 10 ರಿಂದ 12 ಜಿಲ್ಲೆಗಳ ಲಾಕ್‌ಡೌನ್ ಮಾಡಿದ್ರೆ, ಉಳಿದ ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಲಿದೆ. ಈ ಹಿನ್ನೆಲೆ ರಾಜ್ಯವನ್ನು ಸಂಪೂರ್ಣ ಲಾಕ್‌ಡೌನ್ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ. ಈ ಕುರಿತು ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವೆ ಎಂದು ತಿಳಿಸಿದರು.