ಕೊಪ್ಪಳ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ನಾಗರಾಜ ಆರ್. ಜುಮ್ಮನ್ನವರ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ನಾಗರಾಜ ಜುಮ್ಮನ್ನವರ 53 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಮಂಜುನಾಥ ಅವರನ್ನು ಪರಾಭವಗೊಳಿಸಿದರು.
ಸರ್ಕಾರಿ ನೌಕರರ ಚುನಾವಣೆ: ನಾಗರಾಜ ಆರ್. ಜುಮ್ಮನ್ನವರ ಎರಡನೇ ಬಾರಿಗೆ ಆಯ್ಕೆ - undefined
69 ಮತಗಳಲ್ಲಿ 53 ಮತಗಳನ್ನು ನಾಗರಾಜ ಜುಮ್ಮನ್ನವರ ಪಡೆದುಕೊಂಡರೆ, ಪ್ರತಿಸ್ಪರ್ಧಿ ಮಂಜುನಾಥ 15 ಮತಗಳನ್ನು ಪಡೆದಿದ್ದು, ಒಂದು ಮತ ತಿರಸ್ಕೃತಗೊಂಡಿದೆ.

ಒಟ್ಟು 69 ಮತಗಳಲ್ಲಿ 53 ಮತಗಳನ್ನು ನಾಗರಾಜ ಜುಮ್ಮನ್ನವರ ಪಡೆದುಕೊಂಡರೆ ಪ್ರತಿಸ್ಪರ್ಧಿ ಮಂಜುನಾಥ ಅವರು 15 ಮತಗಳನ್ನು ಪಡೆದರು. ಒಂದು ಮತ ತಿರಸ್ಕೃತಗೊಂಡಿದೆ. ಇನ್ನು ಸುಶೀಲೇಂದ್ರ ದೇಶಪಾಂಡೆ ಅವರು 56 ಮತಗಳನ್ನು ಪಡೆದು ಖಜಾಂಚಿಯಾಗಿ ಹಾಗೂ ನಜೀರ ಅಹ್ಮದ್ ಅವರು 51 ಮತಗಳನ್ನು ಪಡೆದು ರಾಜ್ಯ ಪರಿಷತ್ತಿನ ಸದಸ್ಯರಾಗಿ ವಿಜೇತರಾಗಿದ್ದಾರೆ.
ನಾಗರಾಜ ಜುಮ್ಮನ್ನವರ ಜಯಗಳಿಸುತ್ತಿದ್ದಂತೆ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಸಂಭ್ರಮಾಚರಣೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರಟಗಿ ತಾಲೂಕು ಅಧ್ಯಕ್ಷ ಸರ್ದಾರ ಅಲಿ, ಯಲಬುರ್ಗಾ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಾರುತಿ ಆರೇರ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.