ಕೊಪ್ಪಳ:ನಿನ್ನೆ ರಾತ್ರಿ ಜಿಲ್ಲೆಯ ಕುಷ್ಟಗಿ ಪಟ್ಟಣದ ತಾವರಗೇರಾ ರಸ್ತೆ ಬಳಿಯ ಗುಂಡಿಯೊಂದರಲ್ಲಿ ಬಿದ್ದಿದ್ದ ಹಸುವನ್ನು ರಕ್ಷಿಸಲಾಗಿದೆ.
ಕತ್ತಲೆಯಲ್ಲಿ ದಾರಿ ಕಾಣದೆ ಗುಂಡಿಯಲ್ಲಿದ್ದ ಬಿದ್ದಿದ್ದ ಹಸು.. ಸ್ಥಳೀಯರ ಜತೆ ಸೇರಿ ಅಗ್ನಿ ಶಾಮಕ ಸಿಬ್ಬಂದಿಯಿಂದ ರಕ್ಷಣೆ - undefined
ಕುಷ್ಟಗಿ ಪಟ್ಟಣದ ತಾವರಗೇರಾ ರಸ್ತೆ ಬಳಿಯ ಗುಂಡಿಯೊಂದರಲ್ಲಿ ಬಿದ್ದಿದ್ದ ಹಸುವನ್ನು ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ರಕ್ಷಿಸಿದ್ದಾರೆ.

ಗುಂಡಿಯಲ್ಲಿ ಬಿದ್ದಿದ್ದ ಹಸು ರಕ್ಷಣೆ
ಕತ್ತಲೆಯಿದ್ದ ಕಾರಣ ಹಸು ಗುಂಡಿಯಲ್ಲಿ ಬಿದ್ದಿರುವುದು ಯಾರಿಗೂ ಕಂಡಿಲ್ಲ. ಬೆಳಗ್ಗಿನ ಜಾವ ಈ ದೃಶ್ಯವನ್ನು ಕಂಡಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆನಂತರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿಗಳು ಸತತ ಒಂದೂವರೆ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿದರು.