ಕರ್ನಾಟಕ

karnataka

ETV Bharat / state

ಕನಕಗಿರಿಯಲ್ಲಿ ಮಹಿಳಾ ಕಾಯಕೋತ್ಸವದ ಮೊದಲ ಹಂತದ ಕಾಮಗಾರಿ ಆರಂಭ

ಮೊದಲ ಹಂತದಲ್ಲಿ ನಾಲ್ಕು ಪಂಚಾಯಿತಿಗಳನ್ನು ಸೇರಿಸಿ ಕನಕಗಿರಿ ತಾಲೂಕಿನ ಮುಸಲಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಓಬಳಬಂಡಿ ಗ್ರಾಮದಲ್ಲಿನ ನಾಲಾ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಯಿತು.

The beginning of the first phase of the womens carnival
ಕನಕಗಿರಿಯಲ್ಲಿ ಮಹಿಳಾ ಕಾಯಕೋತ್ಸವದ ಮೊದಲ ಹಂತದ ಕಾಮಗಾರಿ ಆರಂಭ

By

Published : Jan 31, 2021, 8:23 AM IST

ಗಂಗಾವತಿ: ಕೇಂದ್ರ ಸರ್ಕಾರದ ನರೇಗಾ ಯೋಜನೆಯಲ್ಲಿ ಮಹಿಳೆಯರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಜಾರಿಗೆ ಬಂದ ಮಹಿಳಾ ಕಾಯಕೋತ್ಸವದ ಮೊದಲ ಹಂತದ ಕಾಮಗಾರಿ ಕನಕಗಿರಿ ಕ್ಷೇತ್ರದಲ್ಲಿ ಆರಂಭವಾಗಿದೆ.

ಕನಕಗಿರಿಯಲ್ಲಿ ಮಹಿಳಾ ಕಾಯಕೋತ್ಸವದ ಮೊದಲ ಹಂತದ ಕಾಮಗಾರಿ ಆರಂಭ

ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲೂಕಿನಲ್ಲಿ ಈಗಾಗಲೇ ಎಲ್ಲಾ ಗ್ರಾಮಗಳಲ್ಲಿ ಸಮೀಕ್ಷೆ ನಡೆದಿದ್ದು, ಮಹಿಳೆಯರನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಈ ಯೋಜನೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ನಾಲ್ಕು ಪಂಚಾಯಿತಿಗಳನ್ನು ಸೇರಿಸಿ ಕನಕಗಿರಿ ತಾಲೂಕಿನ ಮುಸಲಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಓಬಳಬಂಡಿ ಗ್ರಾಮದಲ್ಲಿನ ನಾಲಾ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಯಿತು.

ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್, ಯೋಜನೆಯ ಉದ್ದೇಶ, ಗುರಿ ಬಗ್ಗೆ ಮಾಹಿತಿ ನೀಡಿದರು. ಈ ಕಾಮಗಾರಿಯಲ್ಲಿ ಕೇವಲ ಮಹಿಳೆಯರು ಮಾತ್ರ ಭಾಗವಹಿಸಿದ್ದರು.

ಓದಿ :ತುಮಕೂರಿನ ಹಾಲು ದೇಶದ ಗಡಿಗೆ ರವಾನೆ.. ಜಮ್ಮ ಕಾಶ್ಮೀರದಲ್ಲಿ ನಿತ್ಯ 30 ಸಾವಿರ ಲೀಟರ್ ಕ್ಷೀರ​ ಮಾರಾಟ!

ABOUT THE AUTHOR

...view details