ಕೊಪ್ಪಳ :ಆರೋಗ್ಯ ಇಲಾಖೆಯ ಕೊಪ್ಪಳ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ಜಿಲ್ಲಾ ಆಹಾರ ಸಂರಕ್ಷಣಾಧಿಕಾರಿ ಡಾ.ಎಂ ಎಂ ಕಟ್ಟಿಮನಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಲಂಚ ಸ್ವೀಕಾರ.. ಎಸಿಬಿ ಬಲೆಗೆ ಜಿಲ್ಲಾ ಆಹಾರ ಸಂರಕ್ಷಣಾಧಿಕಾರಿ - kannada news
ಲಂಚ ಪಡೆಯುತ್ತಿದ್ದಾಗಲೇ ಜಿಲ್ಲಾ ಆಹಾರ ಸಂರಕ್ಷಣಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕ್ಯಾಟ್‌ರಿಂಗ್ ವ್ಯಾಪಾರಕ್ಕೆ ಪರವಾನಗಿ ನೀಡಲು ಡಾ. ಎಂ ಎಂ ಕಟ್ಟಿಮನಿ ಲಂಚದ ಬೇಡಿಕೆ ಇಟ್ಟಿದ್ದರು. ಕೂಕನಪಳ್ಳಿ ಗ್ರಾಮದ ಬಸಪ್ಪ ಗುಳದಳ್ಳಿ ಎಂಬುವರು ಕ್ಯಾಟ್‌ರಿಂಗ್ ವ್ಯಾಪಾರಕ್ಕಾಗಿ ಪರವಾನಗಿ ಬಯಸಿ ಅರ್ಜಿ ಸಲ್ಲಿಸಿದ್ದರು. ಆದರೆ, ಪರವಾನಿಗೆ ನೀಡಬೇಕಿದ್ರೇ ಎರಡು ಸಾವಿರ ರೂಪಾಯಿ ಲಂಚಕ್ಕೆ ಡಾ. ಕಟ್ಟಿಮನಿ ಬೇಡಿಕೆ ಇಟ್ಡಿದ್ದರು. ಈ ಬಗ್ಗೆ ಬಸಪ್ಪ ಎಸಿಬಿಗೆ ದೂರು ನೀಡಿದ್ದರು. ಡಾ. ಕಟ್ಟಿಮನಿ ಬಸಪ್ಪನಿಂದ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಯನ್ನ ಬಲೆಗೆ ಕೆಡವಿದ್ದರು.
ಎಸಿಬಿ ಡಿವೈಎಸ್ಪಿ ಆರ್ ಎಸ್ ಉಜ್ಜಿನಕೊಪ್ಪ ನೇತೃತ್ವದಲ್ಲಿ ಅಧಿಕಾರಿಗಳು ತಂಡ ದಾಳಿ ನಡೆಸಿ ಡಾ. ಕಟ್ಟಿಮನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.