ಗಂಗಾವತಿ:ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಪೂಜೆಯ ಕರ್ತವ್ಯದಿಂದ ತಮ್ಮನ್ನು ಬಿಡಿಸಿ ಹೊರಗಟ್ಟಿದ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಅವರನ್ನು 'ಗೂಂಡಾ' ಎಂದು ನಿಂದಿಸಿದ ಆರೋಪದ ಮೇಲೆ ಅರ್ಚಕರೊಬ್ಬರ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೊಪ್ಪಳ ಡಿಸಿಯನ್ನು ನಿಂದಿಸಿದ ಆರೋಪ: ಮಾಜಿ ಅರ್ಚಕನ ವಿರುದ್ಧ ಎಫ್ಐಆರ್ ಗಂಗಾವತಿಯ ತಹಶಿಲ್ದಾರ್ ಎಲ್.ಡಿ. ಚಂದ್ರಕಾಂತ್ ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಗೆ ದೂರು ಕೊಟ್ಟಿದ್ದು, ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಈ ಹಿಂದಿನ ಪ್ರಧಾನ ಅರ್ಚಕರಾಗಿದ್ದ ಮಹಾಂತ ವಿದ್ಯಾದಾಸ ಬಾಬಾ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಬಳಿಕ ಜನ ಹಾಗೂ ಭಕ್ತರ ವಿರೋಧದಿಂದಾಗಿ ವಿದ್ಯಾದಾಸ ಬಾಬಾ ಅವರನ್ನು ಜಿಲ್ಲಾಡಳಿತ ತೆರವು ಮಾಡಿ ದೇಗುಲವನ್ನು ಮುಜುರಾಯಿ ಇಲಾಖೆಗೆ ಒಪ್ಪಿಸಿದ ಬಳಿಕ ಅರ್ಚಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಮಧ್ಯೆ ಜ.17ರಂದು ಅನಗತ್ಯವಾಗಿ ಫೇಸ್ಬುಕ್ ಖಾತೆಯೊಂದರಲ್ಲಿ ಪ್ರತ್ಯಕ್ಷವಾಗಿದ್ದ ವಿದ್ಯಾದಾಸ ಬಾಬಾ, ಮೂರುವರೆ ನಿಮಿಷದ ವಿಡಿಯೋದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರನ್ನು ಜರಿದಿದ್ದನ್ನು ಗಮನಿಸಿದ ತಹಶಿಲ್ದಾರ್ ದೂರು ನೀಡಿದ್ದರು.