ಗಂಗಾವತಿ:ನಗರದಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣವೊಂದರಲ್ಲಿ ಅಪರಾಧಿಗೆ 10 ವರ್ಷ ಸಜೆ ಅಥವಾ 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಅಪ್ರಾಪ್ತೆ ಅತ್ಯಾಚಾರ ಪ್ರಕರಣ : ವಾಹನ ಚಾಲಕನಿಗೆ 10 ವರ್ಷ ಜೈಲು ಶಿಕ್ಷೆ - Ten years in prison for accused
ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣವೊಂದರಲ್ಲಿ ನ್ಯಾಯಾಲಯವು ಅಪರಾಧಿಗೆ 10 ವರ್ಷ ಸಜೆ ಅಥವಾ 25 ಸಾವಿರ ರೂ. ದಂಡ ವಿಧಿಸಿದೆ.
ಅತ್ಯಾಚಾರ ಪ್ರಕರಣ
2016ರ ಮಾರ್ಚ್ 19ರಂದು ನಗರದಲ್ಲಿ ನಡೆದಿದ್ದ ಪ್ರಕರಣದಲ್ಲಿ ಈಗ ಅಪರಾಧ ಸಾಬೀತಾದ ಹಿನ್ನೆಲೆ ವಡ್ಡರಹಟ್ಟಿ ಹನುಮೇಶ ಲಕ್ಷ್ಮಿಕ್ಯಾಂಪ್ ಎಂಬ ಖಾಸಗಿ ವಾಹನ ಚಾಲಕ ಶಿಕ್ಷೆಗೆ ಒಳಗಾಗಿದ್ದಾನೆ. ನಾಲ್ಕುವರೆ ವರ್ಷಕಾಲ ವಿಚಾರಣೆಯ ಬಳಿಕ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಶಂಕರ ಜಾಲವಾಡಿ ಅವರು ಆದೇಶ ಮಾಡಿದ್ದಾರೆ.
ಮದುವೆ ಆಗುವುದಾಗಿ ಅಪ್ರಾಪ್ತೆ ಬೆನ್ನುಬಿದ್ದಿದ್ದ ಆರೋಪಿ ಆಕೆಯನ್ನು ಅತ್ಯಾಚಾರ ಮಾಡಿದ್ದ. ಬಳಿಕ ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಪರಿಣಾಮ ಆಕೆ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಳು.