ಕೊಪ್ಪಳ: ನಗರದ ಖಾಸಗಿ ಶಾಲೆಯೊಂದು ಮಾಡಿರುವ ಯಡವಟ್ಟು ಪಾಲಕರ ಆಕ್ರೋಶಕ್ಕೆ ಕಾರಣವಾಗಿದ್ದು, ಶಾಲೆಯ ಶಿಕ್ಷಕರು ಮಾಡಿರುವ ಕಾರ್ಯವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲಿಡೇ ಇದೆ ಅಂತಾ ತಿಳಿಸಲು ಮಗುವಿಗೆ ಶಿಕ್ಷಕರು ಹೀಗೆ ಮಾಡೋದೇನ್ರೀ.. - ಪಾಲಕರು
ಬಾಲಕನ ಕೈಮೇಲೆ ಶಿಕ್ಷಕರು 'Monday is holiday' ಎಂದು ಬರೆದಿರುವುದಕ್ಕೆ ಪೋಷಕರು ಶಾಲೆಯ ಶಿಕ್ಷಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕ
ನಗರದ ಎಸ್ಎಫ್ಎಸ್ ಶಾಲೆಯಲ್ಲಿ ಪ್ರಿಕೆಜಿ ಓದುತ್ತಿರುವ ವಿದ್ಯಾರ್ಥಿಯ ಕೈಮೇಲೆ ಸೋಮವಾರ ರಜೆ ಇರುವ ಬಗ್ಗೆ ಮಾರ್ಕರ್‌ನಿಂದ ಬರೆದು ಕಳುಹಿಸಲಾಗಿದೆ. ಪ್ರಿಕೆಜಿ ಬಾಲಕನ ಕೈಮೇಲೆ ಶಿಕ್ಷಕರು 'Monday is holiday' ಎಂದು ಮಾರ್ಕರ್‌ನಿಂದ ಬರೆದಿದ್ದಾರೆ. ಶಿಕ್ಷಕರು ಬಾಲಕನ ಕೈಮೇಲೆ ಈ ರೀತಿ ಬರೆದಿರೋದಕ್ಕೆ ಶಿಕ್ಷಕರ ವಿರುದ್ದ ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಬಾಲಕನ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಎಫ್ಎಸ್ ಶಾಲೆ..