ಕರ್ನಾಟಕ

karnataka

ETV Bharat / state

ವಿದ್ಯಾದಾನದ ಜೊತೆ ಸಾಮಾಜಿಕ ತುಡಿತ... 10 ವರ್ಷದಿಂದ ಶಿಕ್ಷಕರ ಕಲಾಸಂಘದಿಂದ ಮಾದರಿ ಸೇವೆ - ಕೊಪ್ಪಳದ ಶಿಕ್ಷಕರ ಕಲಾಸಂಘ

ಕೊಪ್ಪಳದ ಶಿಕ್ಷಕರ ಕಲಾಸಂಘ ಅನನ್ಯ ಸೇವೆ ಮಾಡುತ್ತಿದೆ. ಶಿಕ್ಷಣ, ಸಾಹಿತ್ಯ, ಪರಿಸರ ಕಾಳಜಿಯ ಧ್ಯೇಯದೊಂದಿಗೆ ಈ ಶಿಕ್ಷಕರ ಕಲಾ ಸಂಘ ನಾಟಕಗಳನ್ನು ಪ್ರದರ್ಶಿಸುತ್ತಿದೆ. ಇದರ ಜೊತೆಗೆ ಪರಿಸರ ಕಾಳಜಿಯ ಕಾರ್ಯಗಳನ್ನು ಮಾಡುತ್ತಿದೆ.

teacher
teacher

By

Published : Sep 4, 2020, 2:13 PM IST

ಕೊಪ್ಪಳ: 'ವರ್ಣ ಮಾತ್ರಂ ಕಲಿಸಿದಾತಂ ಗುರು' ಎಂಬ ಮಾತಿದೆ. ಆದರೆ ತಮ್ಮ ವ್ಯಕ್ತಿತ್ವದ ಮೂಲಕ ಕೆಲ ಶಿಕ್ಷಕರು ಸಮಾಜದಲ್ಲಿ ಮಾದರಿಯಾಗುತ್ತಾರೆ.

ಶಿಕ್ಷಕರು ಅಂದ್ರೆ ಕೇವಲ ಪಠ್ಯ ಬೋಧನೆ ಮಾಡುವವರಲ್ಲ. ಅನೇಕ ಶಿಕ್ಷಕರು ತಮ್ಮ ಬೋಧನಾ ಕೌಶಲ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ತುಡಿತ, ಸಮಾಜಿಕ ಕಳಕಳಿ ವ್ಯಕ್ತಿತ್ವದ ಮೂಲಕ ವಿಶೇಷವಾಗಿ ಕಂಡು ಬರುತ್ತಾರೆ. ಅಂತಹ ಸಾಲಿನಲ್ಲಿ ಕೊಪ್ಪಳದ ಈ ಶಿಕ್ಷಕರ ಕಲಾತಂಡ ಸೇರ್ಪಡೆಯಾಗುತ್ತದೆ.

ಶಿಕ್ಷಕರಾದ ಪೂಜಾರ, ರಾಮಣ್ಣ ಶಾವಿ ಸೇರಿ ಸಮಾನ ಮನಸ್ಕ ಸುಮಾರು 20 ಜನ ಶಿಕ್ಷಕರು ಕಳೆದ 10 ವರ್ಷದ ಹಿಂದೆ ಶಿಕ್ಷಕರ ಕಲಾ ಸಂಘ ಸ್ಥಾಪಿಸಿ ಮೌಲ್ಯಯುತ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಾ ಬರುತ್ತಿದ್ದಾರೆ‌.

ಅನನ್ಯ ಸೇವೆ ಮಾಡುತ್ತಿರುವ ಶಿಕ್ಷಕರ ಕಲಾಸಂಘ

ರಂಗಭೂಮಿಯ ಮೂಲಕ ಶಿಕ್ಷಣ, ಸಾಹಿತ್ಯ, ಪರಿಸರ ಕಾಳಜಿಯ ಧ್ಯೇಯದೊಂದಿಗೆ ಈ ಶಿಕ್ಷಕರ ಕಲಾ ಸಂಘ ಈಗಾಗಲೇ ಒಟ್ಟು 13 ನಾಟಕಗಳನ್ನು ರಂಗದ ಮೇಲೆ ಪ್ರದರ್ಶಿಸಿದೆ. ಅವುಗಳಲ್ಲಿ ಮುಖ್ಯವಾಗಿ ಗಂಡುಗಲಿ ಕುಮಾರರಾಮ, ಟಿಪ್ಪು ಸುಲ್ತಾನ್, ಸಿಂಧೂರ ಲಕ್ಷ್ಮಣ, ಸಂಗೊಳ್ಳಿ ರಾಯಣ್ಣ, ರಾವಿ ನದಿ ದಡದಲ್ಲಿ, ರಕ್ತರಾತ್ರಿ, ಶಿವರಾತ್ರಿ, ಸಿಂಹಾಸನ ಖಾಲಿ ಇದೆ ಎಂಬ ನಾಟಕಗಳನ್ನು ಪ್ರದರ್ಶಿಸಿದೆ. ಈ ನಾಟಕ ಪ್ರದರ್ಶನದ ಮೂಲಕ ಬರುವ ಹಣವನ್ನು ಕಷ್ಟದಲ್ಲಿರುವವರಿಗೆ ನೆರವು ನೀಡಿದೆ.

ಇದರ ಜೊತೆಗೆ ಈ ಶಿಕ್ಷಕರ ಕಲಾ ಸಂಘ ಪರಿಸರ ಕಾಳಜಿಯನ್ನು ಹೊಂದಿದ್ದು, ಸಂಘದಲ್ಲಿನ ಶಿಕ್ಷಕರು ಮೊದಲು ತಮ್ಮ ತಮ್ಮ ಶಾಲೆಗಳಲ್ಲಿ ಸಸಿನೆಟ್ಟು ಪೋಷಿಸಿ ಹಸಿರೀಕರಣ ಮಾಡಿಕೊಂಡು, ಬಳಿಕ ಶಾಲೆಗಳನ್ನು ದತ್ತು ಪಡೆದು ಅಲ್ಲಿಯೂ ಪರಿಸರ ಕಾಳಜಿ ಹೊಂದಲು ಪ್ರೇರೇಪಿಸುತ್ತಿದ್ದಾರೆ. ಅಲ್ಲದೆ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲದ ಉಳಿವಿಗಾಗಿ ಹಸಿರು ಶಾಲೆಗಳಿಗೆ ಕೃತಕ ಗುಬ್ಬಚ್ಚಿ ಗೂಡು ವಿತರಿಸಿ ಸೇವೆ ಮಾಡಿ ಮಾದರಿಯಾಗಿದೆ.

ಈ ಶಿಕ್ಷಕರ ಕಲಾ ಸಂಘ ಸ್ಥಾಪನೆಯಾಗಿ ಇದೀಗ 10 ವರ್ಷವಾಗಿದೆ. ಆದರೆ ದಶಮಾನೋತ್ಸವ ಆಚರಣೆಗೆ ಕೊರೊನಾ ಕರಿನೆರಳು ಬೀರಿದೆ.

ABOUT THE AUTHOR

...view details