ಕುಷ್ಟಗಿ :ಖೊಟ್ಟಿ ಅಂಕಪಟ್ಟಿ ನೀಡಿ 19 ವರ್ಷಗಳಿಂದ ಸರ್ಕಾರಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ನಕಲಿ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸುವಂತೆ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದೆ.
ನಕಲಿ ಅಂಕಪಟ್ಟಿ ನೀಡಿ 19 ವರ್ಷ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದ ಶಿಕ್ಷಕ ವಜಾ - ನಕಲಿ ಅಂಕಪಟ್ಟಿ
ಈ ಹಿನ್ನೆಲೆ ನೇಮಕಾತಿ ನಿಯಮ 1977 (20) ಉಲ್ಲಂಘಿಸಿದ್ದಕ್ಕಾಗಿ, ರಾಜ್ಯ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ, ಅಪೀಲು) ನಿಯಮ 1957 8(8)ರನ್ವಯ ಸೇವೆಯಿಂದ ವಜಾಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ್ ಅವರಿಗೆ ಆದೇಶಿಸಲಾಗಿದೆ..
ಶಿಕ್ಷಕ ವಜಾ
ತಾಲೂಕಿನ ಮಿಟ್ಟಲಕೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಆರ್. ಗಂಗಾಧರ, ಆಗಸ್ಟ್ 13, 2002ರಿಂದ ಸಹ ಶಿಕ್ಷಕರಾಗಿ ಸೇವೆಯಲ್ಲಿದ್ದರು. ನೇಮಕಾತಿ ವೇಳೆ ನಕಲಿ ಪಿಯುಸಿ ಅಂಕಪಟ್ಟಿ ನೀಡಿರುವ ಸಂಗತಿ ಇಲಾಖೆಯ ವಿಚಾರಣೆ ವೇಳೆ ಸಾಬೀತಾಗಿದೆ.
ಈ ಹಿನ್ನೆಲೆ ನೇಮಕಾತಿ ನಿಯಮ 1977 (20) ಉಲ್ಲಂಘಿಸಿದ್ದಕ್ಕಾಗಿ, ರಾಜ್ಯ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ, ಅಪೀಲು) ನಿಯಮ 1957 8(8)ರನ್ವಯ ಸೇವೆಯಿಂದ ವಜಾಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ್ ಅವರಿಗೆ ಆದೇಶಿಸಲಾಗಿದೆ.