ಕುಷ್ಟಗಿ (ಕೊಪ್ಪಳ):ಕುಷ್ಟಗಿಯ ಗೌಡಪ್ಪ ಚಹಾ ಅಂಗಡಿಯ ಮಾಲೀಕ ಮಹಾಂತಗೌಡ ಸಂಗನಗೌಡ ಮಾಲಿಪಾಟೀಲ ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಶ್ರೀರಾಮ ಮಂದಿರ ಸಮರ್ಪಣಾ ನಿಧಿಗೆ 10ಸಾವಿರ ರೂ. ನೀಡಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಚಹಾ ಅಂಗಡಿಯ ಮಹಾಂತಗೌಡ 10 ಸಾವಿರ ರೂ. ದೇಣಿಗೆ - ಕುಷ್ಟಗಿ ಇತ್ತೀಚಿನ ಸುದ್ದಿ
ಚಹಾ ಅಂಗಡಿಯ ಮಾಲೀಕ ಮಹಾಂತಗೌಡ ಸಂಗನಗೌಡ ಮಾಲಿಪಾಟೀಲ ಅವರು ಶ್ರೀರಾಮ ಮಂದಿರ ನಿಧಿಗೆ 10ಸಾವಿರ ರೂ. ಸಮರ್ಪಿಸಿದ್ದಾರೆ.
ಮಹಾಂತಗೌಡ ಸಂಗನಗೌಡ ಮಾಲಿಪಾಟೀಲ ನೀಡಿದ ದೇಣಿಗೆ
ಪಟ್ಟಣದ 15ನೇ ವಾರ್ಡಿನ ಗಾಂಧಿ ನಗರದ ನಿವಾಸಿ ಮಹಾಂತಗೌಡ ಸಂಗನಗೌಡ ಮಾಲಿಪಾಟೀಲ ಅವರು, ಕುಷ್ಟಗಿಯ ಕೊಪ್ಪಳ ರಸ್ತೆಯಲ್ಲಿ ಚಿಕ್ಕ ಚಹಾದ ಅಂಗಡಿ ಇಟ್ಟುಕೊಂಡಿದ್ದಾರೆ.
ಶ್ರೀರಾಮ ಭಕ್ತನಾಗಿರುವ ಮಹಾಂತಗೌಡ ರಾಮ ಮಂದಿರಕ್ಕೆ 10 ಸಾವಿರ ರೂ.ಗಳ ಅಳಿಲು ಸೇವೆ ಸಲ್ಲಿಸಿ ಕುಷ್ಟಗಿ ತಾಲೂಕಿನಲ್ಲಿ ಗಮನಾರ್ಹ ಎನಿಸಿದ್ದಾರೆ.