ಕುಷ್ಟಗಿ (ಕೊಪ್ಪಳ):ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಅತಂತ್ರ ಸ್ಥಿತಿಗೆ ಕಾರಣವಾಗಿದೆ. ಕಾಂಗ್ರೆಸ್ 8, ಬಿಜೆಪಿ 7 ಹಾಗೂ ಪಕ್ಷೇತರರು 3 ರಲ್ಲಿ ಆಯ್ಕೆಯಾಗಿದ್ದಾರೆ. ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಈ ಫಲಿತಾಂಶ ಹೊರಬಿದ್ದಿದೆ.
ಈ ಅತಂತ್ರ ಫಲಿತಾಂಶದ ಲಾಭವನ್ನು ಬಿಜೆಪಿ ಪಡೆದುಕೊಳ್ಳುವ ಸಾದ್ಯತೆ ನಿಚ್ಚಳವಾಗಿದೆ. ಈಗಾಗಲೇ 7 ಸ್ಥಾನಗಳಿಸಿರುವ ಬಿಜೆಪಿ, ಮೂವರು ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರುವ ತವಕದಲ್ಲಿದೆ. 8 ಸ್ಥಾನದೊಂದಿಗೆ ಗೆದ್ದು ಬೀಗಿರುವ ಕಾಂಗ್ರೆಸ್ ಮುಂದಿನ ನಡೆ ಪ್ರಶ್ನಾರ್ಥವಾಗಿದೆ.
ಬಿಜೆಪಿಗೆ 1ನೇ ವಾರ್ಡ್ ಲಕ್ಕಿ:
ತಾವರಗೇರಾ 1ನೇ ವಾರ್ಡಗೆ ಸ್ಪರ್ಧಿಸಿದ್ದ ಬಿಜೆಪಿ ದಶರಥಸಿಂಗ್, ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಹನುಮಾನಸಿಂಗ್ ಇಬ್ಬರಿಗೂ ತಲಾ 242 ಮತಗಳು ಪ್ರಾಪ್ತವಾಗಿದ್ದವು. ಚುನಾವಣಾಧಿಕಾರಿ ತಿಪ್ಪೇಸ್ವಾಮಿ ಈ ಸ್ಪರ್ಧಿಗಳ ಒಮ್ಮತದೊಂದಿಗೆ ಅವರ ಸಮಕ್ಷಮದಲ್ಲಿ ಚೀಟಿ ಎತ್ತುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾದರು. ಈ ಫಲಿತಾಂಶದಲ್ಲಿ ದಶರಥಸಿಂಗ್ ಅದೃಷ್ಟಶಾಲಿಯಾಗಿ ಆಯ್ಕೆಯಾದರು.
ಇದನ್ನೂ ಓದಿ: ಅಣ್ಣಿಗೇರಿ ಪುರಸಭೆ: 12 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ.. ಬಿಜೆಪಿಗೆ ಭಾರಿ ಮುಖಭಂಗ
ಕೇವಲ 2 ಮತಗಳ ಅಂತರದ ಕಾಂಗ್ರೆಸ್ಗೆ ಒಲಿದ ಅದೃಷ್ಟ :
15ನೇ ವಾರ್ಡ್ನಲ್ಲಿ ದುರಗಮ್ಮ ಶ್ಯಾಮಣ್ಣ ಶರವಾಟೆ ಕಾಂಗ್ರೆಸ್ ಅಭ್ಯರ್ಥಿ 324 ಮತಗಳು ತಮ್ಮ ಪ್ರತಿಸ್ಪರ್ಧಿ ದುರಗಮ್ಮಮುಖಿಯಾಜಿ 322 ಮತಗಳು ಬಂದಿದ್ದರಿಂದ ದುರಗಮ್ಮಶರವಾಟೆ 2 ಮತಗಳ ಅಂತರದಿಂದ ಗೆಲವು ಸಾಧಿಸಿದರು.
ಪುನರಾಯ್ಕೆ:
ಈ ಚುನಾವಣೆಯಲ್ಲಿ14ನೇ ವಾರ್ಡ್ನ ಕಾಂಗ್ರೆಸ್ ನಾರಾಯಣಗೌಡ ಮೆದಿಕೇರಿ,10ನೇ ವಾರ್ಡಿನ ವೀರನಗೌಡ ಮೆದಿಕೇರಿ ಹಾಗೂ 8ನೇ ವಾರ್ಡಿನ ಭಾಗ್ಯಶ್ರೀ ಉಪ್ಪಳ ಈ ಮೂವರಿಗೆ ಪುನಾರಾಯ್ಕೆಯಾಗುವ ಅವಕಾಶ ಸಿಕ್ಕಿದೆ. ತಾವರಗೆರಾ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶದಲ್ಲಿ ಗೆದ್ದ ಹಾಗೂ ಸಮೀಪದ ಪ್ರತಿಸ್ಪರ್ಧಿಗಳು ಪಡೆದ ಮತಗಳ ವಿವರ
- 1ನೇ ವಾರ್ಡ್:
ದಶರಥ ಸಿಂಗ್ (ಬಿಜೆಪಿ) (ಚೀಟಿ ಎತ್ತುವ ಮೂಲಕ ಆಯ್ಕೆ)
- 2ನೇ ವಾರ್ಡ್ (ಅವಿರೋಧ ಆಯ್ಕೆ)
ಕರಡೆಪ್ಪ ನಾಲತವಾಡ್
- 3ನೇ ವಾರ್ಡ್
ಮರಿಯಮ್ಮ ಬಿಜೆಪಿ-308
ಭಾಗ್ಯಶ್ರೀ ಕಾಂಗ್ರೆಸ್-245
- 4ನೇ ವಾರ್ಡ್
ಅಂಬುಜಾ ಹೂಗಾರ (ಬಿಜೆಪಿ) 272
ಮಂಜುಳಾ ಗಾಂಜಿ (ಕಾಂಗ್ರೆಸ )201
- 5ನೇ ವಾರ್ಡ್
ಶಿವನಗೌಡ ಪುಂಡಗೌಡ್ರು ಬಿಜೆಪಿ 462
ಸಿದ್ದನಗೌಡ ಪುಂಡಗೌಡ್ರು-306 (ಪಕ್ಷೇತರ)
- 6ನೇ ವಾರ್ಡ್
ಹಸೀನಾ ಬೇಗಂ ಬನ್ನು (ಕಾಂಗ್ರೆಸ್)320
ಹುಸೇನಾಬಾನು (ಪಕ್ಷೇತರ) 216
- 7ನೇ ವಾರ್ಡ್
ಶ್ರೀನಿವಾಸಸಿಂಗ (ಕಾಂಗ್ರೆಸ್)