ಕುಷ್ಟಗಿ(ಕೊಪ್ಪಳ): ಕುಷ್ಟಗಿ ತಾಲೂಕಿನ ಹನುಮಸಾಗರ ರಸ್ತೆಯ ತಳವಗೇರಾ-ಚಳಗೇರಾ ಮಧ್ಯೆ ರಸ್ತೆಯ ಬದಿ ಕುಸಿತ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿಯಾಗಿ 5 ಜನರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.
ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ: ಐವರ ಸ್ಥಿತಿ ಗಂಭೀರ - Kushtagi accident news
ರಸ್ತೆ ಕುಸಿತದ ಕಾರಣದಿಂದ ಟಾಟಾ ಏಸ್ ವಾಹನವೊಂದು ಪಲ್ಟಿಯಾಗಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ತಳವಗೇರಾ-ಚಳಗೇರಾ ಮಧ್ಯೆ ನಡೆದಿದೆ.
![ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ: ಐವರ ಸ್ಥಿತಿ ಗಂಭೀರ tata ace](https://etvbharatimages.akamaized.net/etvbharat/prod-images/768-512-9662570-thumbnail-3x2-kst.jpg)
ಮುತರುಜಾಸಾಬ್ ಯಲಬುರ್ಗಾ, ಮಾಸನಬಿ ಮುತರ್ಜಾಸಾಬ್, ಖಜಾಬಿ, ಮಾಬಮ್ಮ ಮಾಲಂಗಸಾಬ್ ಸಾಬ್, ಫಾತೀಮಾ ಮುತರುಜಾ ಸಾಬ್ ತೀವ್ರ ಗಾಯಗೊಂಡವರು. ಗಂಗಾವತಿಯ ಕಿಲ್ಲೇ ಏರಿಯಾದ ಮುಸ್ಲಿಂ ಸಮುದಾಯದ ನಿವಾಸಿಗಳಾದ ಇವರು ಟಾಟಾ ಏಸ್ ವಾಹನದಲ್ಲಿ ಕುಷ್ಟಗಿ ತಾಲೂಕಿನ ಹೂಲಗೇರಾಕ್ಕೆ ಗ್ಯಾರವೀ ಕಾರ್ಯಕ್ರಮಕ್ಕೆ ಹೊರಟಿದ್ದರು. ಕುಷ್ಟಗಿಯಿಂದ ತಳವಗೇರಾ ಮಾರ್ಗದ ಮೂಲಕ ಚಳಗೇರಾ ಸೀಮಾದಲ್ಲಿ ರಸ್ತೆ ಕುಸಿತ ಉಂಟಾಗಿದ್ದು, ತಗ್ಗಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವಾಹನದಲ್ಲಿ ಮೂವರು ಮಕ್ಕಳು ಸೇರಿದಂತೆ 12 ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ಗಾಯಾಳುಗಳನ್ನು 108 ವಾಹನದ ಮೂಲಕ ಕುಷ್ಟಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಟಾಟಾ ಏಸ್ ವಾಹನ ಪಲ್ಟಿಗೆ ರಸ್ತೆ ಕುಸಿತ ಕಾರಣವಾಗಿದೆ. ಪದೇ ಪದೆ ಈ ಸ್ಥಳದಲ್ಲಿ ದುರಂತವಾಗುತ್ತಿದ್ದರೂ ಲೋಕೋಪಯೋಗಿ ಇಲಾಖೆ ಮಾತ್ರ ಇನ್ನೂ ಕಣ್ಮುಚ್ಚಿ ಕುಳಿತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.