ಕುಷ್ಟಗಿ (ಕೊಪ್ಪಳ):ಸಮರ್ಪಕ ಮಾಹಿತಿ ನೀಡುತ್ತಿಲ್ಲವೆಂದುಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಪ್ರಗತಿ ಕೃಷ್ಣಾ) ವ್ಯವಸ್ಥಾಪಕರ ಜೊತೆ ಗ್ರಾಹಕರು ವಾಗ್ವಾದ ನಡೆಸಿದ ಘಟನೆ ನಡೆದಿದೆ.
ಬ್ಯಾಂಕ್ನಲ್ಲಿ ಸಾಲ ಸೌಲಭ್ಯ, ಮುಂಗಡ ಠೇವಣಿ, ಇನ್ನಿತರೆ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ನೀಡದಿರುವ ಹಿನ್ನೆಲೆಯಲ್ಲಿ ಗ್ರಾಹಕರು, ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ಯಾಂಕ್ ವ್ಯವಹಾರ ಕುರಿತು ಮಾಹಿತಿ ನೀಡದ ವ್ಯವಸ್ಥಾಪಕನಿಗೆ ಗ್ರಾಹಕರಿಂದ ತರಾಟೆ ಬ್ಯಾಂಕ್ ವ್ಯವಸ್ಥಾಪಕರಿಗೆ ಯಾವುದೇ ಮಾಹಿತಿ ಕೇಳಿದರೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ನರೇಗಾ, ಪಿಎಂ ಕಿಸಾನ್ ಯೋಜನೆಯ ಹಣ ಜಮೆ, ಪಾಸ್ಬುಕ್ ಪ್ರಿಂಟ್ ಹಾಕಿಕೊಡುವುದಿಲ್ಲ. ಖಾತೆಯಲ್ಲಿನ ಹಣದ ಬಗ್ಗೆ ಪರಿಶೀಲಿಸಿ ಎಂದು ಗ್ರಾಹಕರು ಕೇಳಿಕೊಂಡರೂ ಪಾಸ್ಬುಕ್ ತೆಗೆದು ಗ್ರಾಹಕರ ಮುಖಕ್ಕೆ ಎಸೆಯುತ್ತಾರೆ ಎಂದು ಆರೋಪಿಸಲಾಗಿದೆ.
ಬ್ಯಾಂಕಿನಲ್ಲಿ ವ್ಯವಸ್ಥಾಪಕರು ಗ್ರಾಹಕರ ಮೇಲೆ ನಿರ್ಲಕ್ಷ್ಯ ತೋರುತ್ತಿದ್ದು, ಅವರನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.