ಕೊಪ್ಪಳ/ಗಂಗಾವತಿ: ಕೊರೊನಾದಂತಹ ಮಾರಕ ವೈರಸ್ ಹರಡುವ ಭೀತಿಯಿದ್ದರೂ ಗ್ರಾಮದಲ್ಲಿನ ಯುವಕರು ಸಾಮೂಹಿಕವಾಗಿ ಸೇರುತ್ತಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಿ ಎಂದು ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಯ ಹೊಸಳ್ಳಿ ಗ್ರಾಮಸ್ಥರು ಪೊಲೀಸರ ಮೊರೆ ಹೋದ ಘಟನೆ ನಡೆದಿದೆ.
ಯುವಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳ: ಪೊಲೀಸರ ಮೊರೆ ಹೋದ ಗ್ರಾಮಸ್ಥರು - ಕೊರೊನಾ ಎಫೆಕ್ಟ್
ಗ್ರಾಮದಲ್ಲಿನ ಯುವಕರು ಸಾಮೂಹಿಕವಾಗಿ ಸೇರುತ್ತಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಿ ಎಂದು ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಪಂಚಾಯಿತಿಯ ಹೊಸಳ್ಳಿ ಗ್ರಾಮಸ್ಥರು ಪೊಲೀಸರ ಮೊರೆ ಹೋಗಿದ್ದಾರೆ.
ಗ್ರಾಮದ ಹಿರಿಯ ಮುಖಂಡ ಹೊಸಳ್ಳಿ ಶಂಕರೇಗೌಡರ ನೇತೃತ್ವದಲ್ಲಿ ಡಿವೈಎಸ್ಪಿ ಚಂದ್ರಶೇಖರ ಅವರನ್ನು ಭೇಟಿಯಾದ ಗ್ರಾಮಸ್ಥರು, ಕೊರೊನಾದ ಭೀತಿಯಿಂದಾಗಿ ನಿಷೇಧಾಜ್ಞೆ ಜಾರಿಯಿದ್ದರೂ ಯುವಕರು ಗುಂಪು ಗುಂಪಾಗಿ ಗ್ರಾಮದ ಗುಡಿ, ಕಟ್ಟೆ, ಶಾಲೆ, ಅಂಗನವಾಡಿ ಕೇಂದ್ರದ ಕಟ್ಟೆಗಳ ಮುಂದೆ ಸೇರುತ್ತಿದ್ದಾರೆ. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು, ಲಾಕ್ಡೌನ್ ಪರಿಣಾಮ 80 ರೂಪಾಯಿ ಮೌಲ್ಯದ ಮದ್ಯ ಇದೀಗ 300 ರೂಪಾಯಿಗೆ ಮಾರಾಟವಾಗುತ್ತಿದೆ. ಅಲ್ಲದೇ ಗ್ರಾಮದ ಬಹುತೇಕ ಯುವಕರು ಸೋಮಾರಿಗಳಾಗಿ ಕಟ್ಟೆಗಳ ಮೇಲೆ ಕುಳಿತು ಗುಟ್ಕಾ ಜಗಿಯುವುದು, ಚೌಕಬಾರ ಆಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಪರಿಸ್ಥಿತಿ ಕೈಮೀರುವ ಲಕ್ಷಣ ಗೋಚರಿಸುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಂದಿಸಿದ ಡಿವೈಎಸ್ಪಿ ಡಾ. ಪಿ.ಬಿ.ಚಂದ್ರಶೇಖರ ಮಾತನಾಡಿ, ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಂಡು ಯುವಕರಿಗೆ ನೈತಿಕ ಪಾಠ ಹೇಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.