ಕೊಪ್ಪಳ:ಈ ಹಿಂದೆ ಜಿಲ್ಲೆಯ ಕುಷ್ಟಗಿ ತಹಶಿಲ್ದಾರ್ರಾಗಿದ್ದ ಕೆ.ಎಂ. ಗುರುಬಸವರಾಜ ತಮ್ಮ ಕಚೇರಿಯ ಸಹೋದ್ಯೋಗಿಗೆ ಮುತ್ತಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಅವರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ತಹಶೀಲ್ದಾರ್ ವೈರಲ್ ವಿಡಿಯೋ ಪರಿಶೀಲಿಸಿ ಕ್ರಮ: ಡಿಸಿ ಸ್ಪಷ್ಟನೆ - Koppal District Collector Vikas Kishore
ಆರು ತಿಂಗಳ ಬಳಿಕ ವಿಡಿಯೋ ವೈರಲ್ ಮಾಡಲು ಕಾರಣವೇನು ಎಂಬುದರ ಬಗ್ಗೆಯೂ ಪರಿಶೀಲಿಸಬೇಕಾಗುತ್ತದೆ. ಅಸಲಿಗೆ ಈ ವಿಡಿಯೋ ಯಾವಾಗಿನದ್ದು ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿಕಾಸ ಕಿಶೋರ್ ತಿಳಿಸಿದ್ದಾರೆ
ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ್
ನಾನು ವೈರಲ್ ವಿಡಿಯೋ ನೋಡಿಲ್ಲ. ಅವರು ಕುಷ್ಟಗಿ ತಹಶೀಲ್ದಾರರಾಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾದ ವಿಡಿಯೋ ಇದಾಗಿದೆ. ಆರು ತಿಂಗಳ ಬಳಿಕ ವಿಡಿಯೋ ವೈರಲ್ ಮಾಡಲು ಕಾರಣವೇನು ಎಂಬುದರ ಬಗ್ಗೆಯೂ ಪರಿಶೀಲಿಸಬೇಕಾಗುತ್ತದೆ. ಅಸಲಿಗೆ ಈ ವಿಡಿಯೋ ಯಾವಾಗಿನದ್ದು ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.