ಕರ್ನಾಟಕ

karnataka

ETV Bharat / state

ಕುಷ್ಟಗಿ ತಾಲೂಕಿನ ಕೆರೆಗಳ ಮಾಹಿತಿ ನೀಡುವಂತೆ ತಹಶೀಲ್ದಾರ್ ಎಂ.ಸಿದ್ದೇಶ ಸೂಚನೆ - ಕುಷ್ಟಗಿ ತಹಶೀಲ್ದಾರ್ ಎಂ.ಸಿದ್ದೇಶ ಸಭೆ ನ್ಯೂಸ್

ಕುಷ್ಟಗಿ ತಾಲೂಕಿನ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ 41 ಕೆರೆ ಮತ್ತು ಜಿ.ಪಂ. ವ್ಯಾಪ್ತಿಯಲ್ಲಿನ 7 ಕೆರೆಗಳ ವಾಸ್ತವ ಸ್ಥಿತಿ - ಗತಿ, ಕೆರೆಯ ಒತ್ತುವರಿ ಬಗ್ಗೆ ವರದಿ ನೀಡಬೇಕೆಂದು ತಹಶೀಲ್ದಾರ್ ಎಂ.ಸಿದ್ದೇಶ ಸೂಚಿಸಿದರು.

ಸಿದ್ದೇಶ
ಸಿದ್ದೇಶ

By

Published : Jul 3, 2020, 1:30 PM IST

ಕುಷ್ಟಗಿ/ಕೊಪ್ಪಳ : ತಾಲೂಕಿನ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿರುವ 41 ಕೆರೆ ಮತ್ತು ಜಿ.ಪಂ. ವ್ಯಾಪ್ತಿಯಲ್ಲಿನ 7 ಕೆರೆಗಳ ವಾಸ್ತವ ಸ್ಥಿತಿ-ಗತಿ, ಕೆರೆ ಒತ್ತುವರಿ ಬಗ್ಗೆ ವರದಿ ನೀಡಬೇಕೆಂದು ತಹಶೀಲ್ದಾರ್ ಎಂ.ಸಿದ್ದೇಶ ಸೂಚಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತಾಲೂಕಿನ ಬಹುತೇಕ ಕೆರೆಗಳು ಮಾಲೀಕರ ಹೆಸರಲ್ಲಿವೆ. ಅಂತಹ ಕೆರೆಗಳನ್ನು ಗುರುತಿಸಿ ಇಂದೀಕರಣ ( ಅಪ್ಡೇಟಿಂಗ್ -ನವೀಕರಣ ) ಮಾಡುವಂತೆ ಸೂಚಿಸಿದರು.

ಪಂಚಾಯತ್​​ ರಾಜ್ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ 7 ಕೆರೆಗಳಿದ್ದು, 3 ಪಹಣಿ ಇಂದೀಕರಣವಾಗಿದೆ. ಇನ್ನುಳಿದ ಕೆರೆಗಳ ದಾಖಲೆಗಳ ವಿವರಗಳನ್ನು ಕ್ರೋಢಿಕರಿಸಿ ಪಹಣಿ ಇಂದೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ ರಾಜ್ ಇಂಜಿನೀಯರಿಂಗ್ ಉಪ ವಿಭಾಗದ ಬಸವರಾಜ್ ಸಜ್ಜನ್ ತಿಳಿಸಿದರು.

ಸಣ್ಣ ನೀರಾವರಿ ಇಲಾಖೆಯ ಜೆಇ ರಾಜಶೇಖರ್​​​ ಕಟ್ಟಿಮನಿ ಮಾತನಾಡಿ, 41 ಕೆರೆಗಳ ಪೈಕಿ 15 ಕೆರೆಗಳ ಇಂದೀಕರಣವಾಗಿದೆ. ಇನ್ನುಳಿದ ಕೆರೆಗಳ ಇಂದೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ವೇಳೆ, ಭೂ ದಾಖಲೆಗಳ ಅಧಿಕಾರಿ ಈರಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ABOUT THE AUTHOR

...view details