ಗಂಗಾವತಿ:ತಾಲೂಕಿನ ಹೆಬ್ಬಾಳದ ಬೋಳಾಡಿ ಬಸವೇಶ್ವರ ಬೃಹನ್ಮಠದ ನಾಗಭೂಷಣ ಸ್ವಾಮೀಜಿಯವರು ಮೋದಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುವ ಪತ್ರವೊಂದನ್ನು ಪ್ರಧಾನಿ ನರೇಂದ್ರ ಮೋದಿಗೆ ಬರೆದಿದ್ದಾರೆ.
ಸಿಎಎಗೆ ನಮ್ಮ ಬೆಂಬಲವಿದೆ ಎಂದು ಪಿಎಂಗೆ ಪತ್ರ ಬರೆದ ಕೊಪ್ಪಳದ ಸ್ವಾಮೀಜಿ! - ಕೊಪ್ಪಳ ಸುದ್ದಿ
ಪೌರತ್ವ ಕಾಯ್ದೆಯಿಂದ ದೇಶದ ಯಾವೊಬ್ಬ ಪ್ರಜೆಗೂ ತೊಂದರೆಯಾಗುವುದಿಲ್ಲ ಹಾಗೂ ಸಿಎಎಗೆ ನಮ್ಮಿಂದ ಮತ್ತು ಭಕ್ತ ವೃಂದದಿಂದ ಸಂಪೂರ್ಣ ಬೆಂಬಲವಿದೆ ಎಂದು ಇದೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಸ್ವಾಮೀಜಿಯೊಬ್ಬರು ಪ್ರಧಾನಿ ಮೋದಿಗೆ ಪತ್ರವೊಂದನ್ನು ಬರೆದಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ಇಡೀ ದೇಶದಲ್ಲಿ ಪರ ವಿರೋಧಿ ನಿಲುವು ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಇದೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಸ್ವಾಮೀಜಿಯೊಬ್ಬರು ಸಿಎಎ, ಎನ್ಆರ್ಸಿಯನ್ನು ಬಹಿರಂಗವಾಗಿ ಬೆಂಬಲಿಸಿ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಇಷ್ಟಕ್ಕೂ ಪತ್ರದಲ್ಲಿ ಏನಿದೆ?:ದೇಶದ ಹಿತಾಸಕ್ತಿ ಕಾಪಾಡುತ್ತಿರುವ ಮೋದಿ ಅವರ ನಿರ್ಧಾರದಿಂದಾಗಿ ದೇಶದೊಳಗೂ ಹಾಗೂ ಹೊರಗೂ ಬಲಿಷ್ಠವಾಗುತ್ತಿದೆ. ಕಾನೂನು ಬದ್ಧವಾದ ನಿಮ್ಮ ಹೋರಾಟದ ಅರಿವು ಎಲ್ಲರಿಗೂ ಇಲ್ಲದಿರುವುದು ದುರದೃಷ್ಠಕರ. ಕೆಲ ಊಹಾಪೋಹಗಳನ್ನು ಜನರು ನಂಬಿರಿವುದು ಸೂಕ್ತವಲ್ಲ. ಪೌರತ್ವ ಕಾಯ್ದೆಯಿಂದ ದೇಶದ ಯಾವೊಬ್ಬ ಪ್ರಜೆಗೂ ತೊಂದರೆಯಾಗುವುದಿಲ್ಲ ಹಾಗೂ ಸಿಎಎಗೆ ನಮ್ಮಿಂದ ಮತ್ತು ಭಕ್ತ ವೃಂದದಿಂದ ಸಂಪೂರ್ಣ ಬೆಂಬಲವಿದೆ ಎಂಬಿತ್ಯಾದಿ ಅಂಶಗಳನ್ನು ಸ್ವಾಮೀಜಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.