ಕರ್ನಾಟಕ

karnataka

ETV Bharat / state

ವರದಕ್ಷಿಣೆ ಕಿರುಕುಳ ಶಂಕೆ: ಹೆಂಡತಿ ಕೊಂದ ಗಂಡ ಅಂದರ್ - Husband killed wife was arrested

ರೇಷ್ಮಾ ಎಂಬ ಮಹಿಳೆಯನ್ನು ವರದಕ್ಷಿಣೆ ಸಲುವಾಗಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಆಕೆಯನ್ನು ಕೊಂದ ಪತಿ ಹನುಮೇಶ್​ ಮೇಟಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೆಂಡತಿ ಕೊಂದ ಗಂಡ ಅಂದರ್
ಹೆಂಡತಿ ಕೊಂದ ಗಂಡ ಅಂದರ್

By

Published : Nov 4, 2022, 7:51 PM IST

ಕೊಪ್ಪಳ:ಯಲಬುರ್ಗಾ ತಾಲೂಕಿನ ಕಲ್ಲಭಾವಿಯ ಗೃಹಿಣಿ ರೇಷ್ಮಾ ಕಾಣೆಯಾದ ಹಾಗೂ ಶಿವಪುರದ ಹತ್ತಿರ ಆಕೆ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ತಿರುವು ಪಡೆದುಕೊಂಡಿದೆ. ರೇಷ್ಮಾ ಕೊಲೆ ಆರೋಪದಲ್ಲಿ ಆಕೆಯ ಪತಿ ಹನುಮೇಶ್ ಮೇಟಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹನುಮೇಶ ಮೇಟಿಯನ್ನು ಗುರುವಾರ ಬೆಳಗಿನ ಜಾವ 4.45 ಕ್ಕೆ ಭಾನಾಪುರ ಹತ್ತಿರ ಬಂಧಿಸಲಾಗಿದೆ. ರೇಷ್ಮಾಳ ಕೊಲೆ ವರದಕ್ಷಿಣೆ ಕಿರುಕುಳದಿಂದ ಆಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೇಷ್ಮಾ ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹನುಮಗುಡ್ಡ (ಹೊಸೂರು) ದವರು. ಕಲ್ಲಭಾವಿಯ ಹನುಮೇಶ ಜೊತೆ ಇದೇ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ 11 ತೊಲೆ ಬಂಗಾರ 2 ಲಕ್ಷ 50 ರೂಪಾಯಿ ನಗದು ಹಣ ನೀಡಲಾಗಿತ್ತು ಎಂದು ಕೊಲೆಯಾದ ರೇಷ್ಮಾ ತಂದೆ ಮಲ್ಲಪ್ಪ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಒಬ್ಬ ಬಾಲಕ ಅತ್ಯಾಚಾರ ಕೊಲೆ ಮಾಡೋದು ಅಸಾಧ್ಯ: ಆರೋಪಿಗಳ ಬಂಧನಕ್ಕೆ ಮಹಿಳೆಯರ ಆಗ್ರಹ

ABOUT THE AUTHOR

...view details