ಕೊಪ್ಪಳ: ನಾಳೆ ಏಪ್ರಿಲ್ 5 ರಂದು ರಾತ್ರಿ 9 ಗಂಟೆ 9 ನಿಮಿಷಕ್ಕೆ ದೀಪ ಬೆಳಗಲು ಪ್ರಧಾನಿ ಮೋದಿ ಕರೆ ನೀಡಿದ ಹಿನ್ನೆಲೆ ಪಟ್ಟಣ ಪಂಚಾಯತ್ ಸದಸ್ಯ ಮನೆ, ಮನೆಗೆ ತೆರಳಿ ಮೇಣದ ಬತ್ತಿಗಳನ್ನು ವಿತರಿಸಿದ್ದಾರೆ.
ಪಟ್ಟಣ ಪಂಚಾಯಿತಿ ಸದಸ್ಯನಿಂದ ಉಚಿತ ಮೇಣದ ಬತ್ತಿ ವಿತರಣೆ - ಕೊಪ್ಪಳದಲ್ಲಿ ಲಾಕ್ಡೌನ್
ಕೊಪ್ಪಳದ ಭಾಗ್ಯನಗರದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಸಾಲಿಮಠ ಎಂಬುವವರು ಉಚಿತವಾಗಿ ಮೇಣದ ಬತ್ತಿ ವಿತರಿದರು. ಮೋದಿ ಕರೆ ಬೆಂಬಲಿಸುವಂತೆ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯನಿಂದ ಉಚಿತ ಮೇಣದ ಬತ್ತಿ ವಿತರಣೆ
ಕೊಪ್ಪಳದ ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಸಾಲಿಮಠ ಎಂಬುವವರು ಉಚಿತವಾಗಿ ಸುಮಾರು 2 ಸಾವಿರಕ್ಕೂ ಅಧಿಕ ಮೇಣದ ಬತ್ತಿಗಳನ್ನು ವಿತರಿಸಿದ್ದಾರೆ.
ಅಲ್ಲದೇ ನಾಳೆ ರಾತ್ರಿ ಮೇಣದ ಬತ್ತಿ ಬೆಳಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಗೆ ಬೆಂಬಲಿಸುವಂತೆ, ಇದೇ ಸಂದರ್ಭದಲ್ಲಿ ಮನವಿ ಮಾಡಿದರು.