ಕರ್ನಾಟಕ

karnataka

ETV Bharat / state

ಕಾನೂನು ಬಾಹಿರ ಕೃತ್ಯಗಳಿಗೆ ಪೊಲೀಸರ ಕುಮ್ಮಕ್ಕು: ಗಂಗಾವತಿ ದಲಿತ ಮುಖಂಡನ ಆರೋಪ - ಕೊಪ್ಪಳ ಎಸ್​ಪಿ ಜಿ. ಸಂಗೀತಾ

ಕೊಪ್ಪಳ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗಂಗಾವತಿಯ ದಲಿತ ಮುಖಂಡ ಆರತ ತಿಪ್ಪಣ್ಣ ಆರೋಪಿಸಿದ್ದಾರೆ.

dsds
ಗಂಗಾವತಿ ದಲಿತ ಮುಖಂಡನ ಆರೋಪ

By

Published : Aug 1, 2020, 1:58 PM IST

ಗಂಗಾವತಿ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಗಣಿಗಾರಿಕೆ, ಇಸ್ಪೀಟ್ ಜೂಜಾಟದಲ್ಲಿ ಪೊಲೀಸ್ ಇಲಾಖೆಯ ಮೇಲಧಿಕಾರಿಗಳ ಕೈವಾಡ ಇದೆ ಎಂದು ದಲಿತ ಮುಖಂಡ ಆರತ ತಿಪ್ಪಣ್ಣ ಆರೋಪಿಸಿದ್ದಾರೆ.

ಗಂಗಾವತಿ ದಲಿತ ಮುಖಂಡನ ಆರೋಪ

ನಗರದಲ್ಲಿ ಮಾತನಾಡಿದ ಅವರು, ವ್ಯಾಪಕವಾಗಿರುವ ಜೂಜಾಟದ ಬಗ್ಗೆ ಡಿವೈಎಸ್​ಪಿಗೆ ಮನವಿ ಪತ್ರ ಕೊಡಲಾಗಿತ್ತು. ಈ ಹಿನ್ನೆಲೆ ಡಿವೈಎಸ್​ಪಿ ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಠಾಣೆಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ತಕ್ಷಣ ವಿಠಲಾಪುರದಲ್ಲಿ ನಡೆದ ಜೂಜು ಅಡ್ಡೆ ಮೇಲೆ ದಾಳಿ ಮಾಡಿದಾಗ ನಗರಸಭಾ ಸದಸ್ಯರು ಸಹ ಅಲ್ಲಿದ್ದರು. ಈ ವೇಳೆ, ಪೊಲೀಸರು 17 ಕಾರುಗಳನ್ನು ವಶಕ್ಕೆ ಪಡೆದು ನಾಲ್ಕು ಲಕ್ಷ ಹಣ ಸೀಜ್ ಮಾಡಿದ್ದಾರೆ ಎಂದು ಎಫ್ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಅಲ್ಲಿ ಒಂದೂವರೆ ಕೋಟಿಗೂ ಅಧಿಕ ಮೌಲ್ಯದ ಹಣವನ್ನು ಜೂಜಾಟದಲ್ಲಿ ಪಣಕ್ಕೆ ಇಡಲಾಗಿತ್ತು. ವಶಕ್ಕೆ ಪಡೆದ 17 ಕಾರುಗಳ ಮಾಲೀಕರ ಮೇಲೆ ಇದುವರೆಗೂ ದೂರು ದಾಖಲಿಸಿಲ್ಲ. ಈ ಪ್ರಕರಣದಲ್ಲಿ ಎಸ್​ಪಿ ಜಿ. ಸಂಗೀತಾ ಅವರ ನೇರ ಕೈವಾಡವಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ABOUT THE AUTHOR

...view details