ಕರ್ನಾಟಕ

karnataka

ETV Bharat / state

ಭತ್ತಕ್ಕೆ ಬೆಂಬಲ ಬೆಲೆ ಹೆಚ್ಚಳ ಭರವಸೆ: ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ... ರೈತರಿಗೆ ಸಿಗುತ್ತಾ ಸಿಹಿ? - ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ

ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯುತ್ತಿದ್ದು, ರಾಜ್ಯ ಸರ್ಕಾರವು ವಿಶೇಷ ಪ್ರೋತ್ಸಾಹದನದಡಿ ಭತ್ತಕ್ಕೆ ಬೆಂಬಲ ಬೆಲೆ ಸೂಚಿಸಬೇಕೆಂದು ಬಿಎಸ್​ವೈಗೆ ಶಾಸಕರ ನಿಯೋಗ ಮನವಿ ಮಾಡಿದ್ದಕ್ಕೆ ಸಿಎಂ ಸ್ಪಂದಿಸಿದ್ದಾರೆ.

CM response
ಸಿಎಂ ಸ್ಪಂದನೆ

By

Published : Jan 7, 2020, 9:30 AM IST

ಗಂಗಾವತಿ:ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಭತ್ತ ಬೆಳೆಯುತ್ತಿದ್ದು ವಿಶೇಷ ಪ್ರೋತ್ಸಾಹದನದಡಿ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ನೇತೃತ್ವದಲ್ಲಿ ಭೇಟಿಯಾದ ಶಾಸಕರ ನಿಯೋಗಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಂದಿಸಿದ್ದಾರೆ.

ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ

ಪ್ರತಿ ಕ್ವಿಂಟಾಲ್​ಗೆ ಕೇಂದ್ರ ಸರ್ಕಾರ 1,835 ರೂ. ನಿಗದಿ ಮಾಡಿದೆ. ಇದರ ಜೊತೆಗೆ ರಾಜ್ಯ ಸರ್ಕಾವೂ ಹೆಚ್ಚುವರಿ ಪ್ರತಿ ಕ್ವಿಂಟಾಲ್​ಗೆ 200 ರೂ. ಒಟ್ಟು ರೂ.2015 ನೀಡುವುದಾಗಿ ಸಂಸದರ ನೇತೃತ್ವದಲ್ಲಿನ ನಿಯೋಗಕ್ಕೆ ಸಿಎಂ ಒಪ್ಪಿಗೆ ನೀಡಿ ಘೋಷಣೆ ಮಾಡಿದ್ದಾರೆ ಎಂದು ಶಾಸಕ ಬಸವರಾಜ್ ದಡೇಸೂಗೂರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇನ್ನು ನಿಯೋಗದಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಪರಣ್ಣ ಮುನವಳ್ಳಿ ಗಂಗಾವತಿ, ಸೋಮಲಿಂಗಪ್ಪ ಸಿರುಗುಪ್ಪ, ಪ್ರತಾಪಗೌಡ ಪಾಟೀಲ್ ಮಸ್ಕಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಸಂಸದರ ನಿಯೋಗಕ್ಕೆ ಸಿಎಂ ಸ್ಪಂದನೆ

ABOUT THE AUTHOR

...view details