ಕರ್ನಾಟಕ

karnataka

ETV Bharat / state

ಗಂಗಾವತಿ ತಾಲೂಕಿನಲ್ಲಿ ಜನ ಜೀವನ ಸಹಜ, ಲಾಕ್‌ಡೌನ್‌ ಬಗ್ಗೆ ನಿಷ್ಕಾಳಜಿ

2ನೇ ವಾರದ ಸಂಡೇ ಲಾಕ್​ಡೌನ್​ಗೆ ಗಂಗಾವತಿ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Gangavati
ಸಂಡೇ ಲಾಕ್​ಡೌನ್: ಗಂಗಾವತಿ ತಾಲೂಕಿನಲ್ಲಿ ಜನ ಜೀವನ ಸಹಜ..

By

Published : Jul 12, 2020, 3:15 PM IST

ಗಂಗಾವತಿ:ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸಂಡೇ ಲಾಕ್​ಡೌನ್​ ಘೋಷಿಸಿದೆ. ಆದರೆ ಗಂಗಾವತಿ ತಾಲೂಕಿನಲ್ಲಿ ಜನರ ಹೊರಗಡೆ ಓಡಾಟ ಸಾಮಾನ್ಯವಾಗಿದೆ. ವಾಹನ ಸವಾರರು ಸಂಡೇ ಲಾಕ್ ಡೌನ್ ಗೂ ನಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ.

ಸಂಡೇ ಲಾಕ್​ಡೌನ್: ಗಂಗಾವತಿ ತಾಲೂಕಿನಲ್ಲಿ ಜನ ಜೀವನ ಸಹಜ..

ರಾಜ್ಯಾದ್ಯಂತ ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗಿನವರೆಗೆ ಸಂಪೂರ್ಣ ಲಾಕ್​ಡೌನ್​ಗೆ ಸರ್ಕಾರ ಆದೇಶಿಸಿದೆ. ಆದರೆ ಈ ಬಗ್ಗೆ ಜನರಲ್ಲಿ ಯಾವುದೇ ಅರಿವು ಮೂಡಿಲ್ಲದ್ದರ ಪರಿಣಾಮ ಲಾಕ್​ಡೌನ್ ಸಂದರ್ಭದಲ್ಲೂ ಜನ ಜೀವನ ಸಹಜವಾಗಿದೆ. ನಗರದ ಗಲ್ಲಿ ಗಲ್ಲಿಗಳಲ್ಲಿ ಜನ ವಾಹನ ಸಂಚಾರ ಎಂದಿನಂತೆ ಸಹಜವಾಗಿಯೇ ಇದೆ. ಸಂಬಂಧಿತ ಪೊಲೀಸ್ ಇಲಾಖೆಯ ಯಾವೊಬ್ಬ ಸಿಬ್ಬಂದಿಯೂ ಜನರ ನಿಯಂತ್ರಣಕ್ಕೆ ಮುಂದಾಗಿದಿರುವುದು ಜನರ ಓಡಾಟದ ಹೆಚ್ಚಳಕ್ಕೆ ಕಾರಣವಾಗಿತ್ತು. ಮುಖ್ಯವಾಗಿ ನಗರದ ಮಹಾತ್ಮಗಾಂಧಿ, ಮಹಾವೀರ, ಗಣೇಶ ವೃತ್ತ, ಕೇಂದ್ರ ಬಸ್ ನಿಲ್ದಾಣದಲ್ಲಿ ಮಾತ್ರ ಜನ ಸಂಚಾರ ವಿರಳವಾಗಿತ್ತು. ಉಳಿದಂತೆ ಅದರಲ್ಲಿಯೂ ನಗರದ ಒಳ ರಸ್ತೆಗಳಲ್ಲಿ ಜನ ಸಂಚಾರ, ವಾಹನಗಳ ಓಡಾಟ ಸಹಜವಾಗಿತ್ತು.

ಕೇವಲ ವ್ಯಾಪಾರ ವಹಿವಾಟು ಮಳಿಗೆಗಳು ಮಾತ್ರ ಬಂದಾಗಿದ್ದವು. ನಗರದ ಒಳ ರಸ್ತೆಗಳಲ್ಲಿ ಜನ ಸಂಚಾರ, ವಾಹನಗಳ ಓಡಾಟ ಸಹಜವಾಗಿತ್ತು.

ABOUT THE AUTHOR

...view details