ಗಂಗಾವತಿ: ನಗರದಲ್ಲಿ ಪ್ರತೀ ಭಾನುವಾರ ಸಾವಿರಾರು ದ್ವಿಚಕ್ರ ವಾಹನಗಳನ್ನು ಮಾರು ಮತ್ತು ಕೊಳ್ಳುವ ಮೇಳವಾಗಿ ನಡೆಯುತ್ತಿರುವ ಸಂಡೇ ಬಜಾರ್ ಕಾನೂನು ಬಾಹಿರ ವಹಿವಾಟಾಗಿದ್ದು, ಇನ್ನು ಮುಂದೆ ಸ್ಥಗಿತಗೊಳಿಸಬೇಕು ಎಂದು ಪೊಲೀಸರು ಸಂಡೇ ಬಜಾರ್ ನಿರ್ವಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸಂಡೇ ಬಜಾರ್ ಕಾನೂನು ಬಾಹಿರ: ಅವಕಾಶವಿಲ್ಲ ಎಂದ ಪೊಲೀಸರು - ಪೊಲೀಸ್ ಸೂಚನೆ
ಗಂಗಾವತಿಯಲ್ಲಿ ಪ್ರತೀ ಭಾನುವಾರ ನಡೆಯುತ್ತಿರುವ ಸಂಡೇ ಬಜಾರ್ ಕಾನೂನು ಬಾಹಿರ ವಹಿವಾಟಾಗಿದ್ದು, ಇನ್ನು ಮುಂದೆ ಸ್ಥಗಿತಗೊಳಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸಂಡೇ ಬಜಾರ್ ನಡೆಸುವ ನಗರದ ವಿವಿಧ ವರ್ತಕರನ್ನು ಹಾಗೂ ಅದಕ್ಕೆ ಅವಕಾಶ ನೀಡುವ ಅಂಗಡಿಗಳ ಮಾಲೀಕರನ್ನು ಠಾಣೆಗೆ ಕರೆಯಿಸಿ ಸಭೆ ನಡೆಸಿದ ಪೊಲೀಸರು, ಅಕ್ರಮವಾಗಿ ನಡೆಯತ್ತಿರುವ ಈ ಸಂಡೇ ಬಜಾರ್ ಇನ್ನು ಮುಂದೆ ಸ್ಥಗಿತಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು. ಕೋವಿಡ್ ಪರಿಸ್ಥಿತಿ ಹಿನ್ನೆಲೆ ಆರೋಗ್ಯದ ಜಾಗೃತಿ ಮರೆತು ಜನ ನೂರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಸಂಬಂಧಿತ ವಹಿವಾಟಿನ ಅನುಮತಿ ಪತ್ರ ಹಾಜರುಪಡಿಸಿ ಎಂದು ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಸೂಚನೆ ನೀಡಿದರು.
ಕಳೆದ ಎರೆಡು ವಾರದಿಂದ ನಗರದಲ್ಲಿ ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿದ್ದು, ಅವುಗಳ ತಾಂತ್ರಿಕ ಮಾಹಿತಿ ಮರೆ ಮಾಚಿ ಸಂಡೇ ಬಜಾರ್ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಹಿನ್ನೆಲೆ ಇದೀಗ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.