ಕರ್ನಾಟಕ

karnataka

ETV Bharat / state

ಕೊಪ್ಪಳ ಡಿಸಿ ಆದೇಶ ಉಲ್ಲಂಘಿಸಿ ಗಂಗಾವತಿಯಲ್ಲಿ ಸಂಡೆ ಬಜಾರ್ ಆರಂಭ - ಕೊಪ್ಪಳ ಸುದ್ದಿ

ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜನ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಬಾರದು ಎಂಬ ಕಾರಣಕ್ಕೆ ನಗರದಲ್ಲಿ ಸಂಡೆ ಬಜಾರ್​​​​ಗೆ ಕಡಿವಾಣ ಹಾಕಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

Sunday Bazaar begins in violation of Koppal District Collector's order
ಕೊಪ್ಪಳ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಸಂಡೆ ಬಜಾರ್ ಆರಂಭ

By

Published : Oct 18, 2020, 1:56 PM IST

ಗಂಗಾವತಿ:ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜನ ಹೆಚ್ಚಿನ ಪ್ರಮಾಣದಲ್ಲಿ ಸೇರಬಾರದು ಎಂಬ ಕಾರಣಕ್ಕೆ ನಗರದಲ್ಲಿ ದ್ವಿಚಕ್ರ ವಾಹನಗಳ ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಯಂತಿದ್ದ ಸಂಡೆ ಬಜಾರ್​​ಗೆ ಕಡಿವಾಣ ಹಾಕಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.

ಆದರೆ, ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಭಾನುವಾರ ಸಂಡೆ ಬಜಾರ್ ನಿರ್ವಹಿಸಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಸಂಡೆ ಬಜಾರ್ ಆರಂಭವಾಗಿದೆ ಎಂಬ ಮಾಹಿತಿ ಹಿನ್ನೆಲೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಕೊಳ್ಳಲು ಜನ ನೂರಾರು ಸಂಖ್ಯೆಯಲ್ಲಿ ಸೇರಿದ್ದರು.

ಕೊಪ್ಪಳ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಸಂಡೆ ಬಜಾರ್ ಆರಂಭ
ಯಾವುದೇ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕದೇ ಮಾರುಕಟ್ಟೆಯಲ್ಲಿನ ಚಟುವಟಿಕೆಯಲ್ಲಿ ಜನ ಪಾಲ್ಗೊಂಡಿರುವುದು ಕಂಡು ಬಂತು. ಇಲಾಖೆಯಿಂದ ಅನುಮತಿ ಇಲ್ಲದೇ ಅಕ್ರಮವಾಗಿ ನಡೆಯುತ್ತಿರುವ ಸಂಡೇ ಬಜಾರ್ ಸ್ಥಗಿತಗೊಳಿಸುವಂತೆ ನಗರಸಭೆ ಪೌರಾಯುಕ್ತ ಸೂಚನೆ ನೀಡಿದ್ದರು.

ಅಲ್ಲದೇ ಪೊಲೀಸರು ಕೂಡ ಸಂಡೆ ಬಜಾರ್ ನಿರ್ವಹಕರ ಸಭೆ ನಡೆಸಿ ವಾಹನ ಮಾರಾಟ, ಕೊಳ್ಳುವುದು ಬಂದ್ ಮಾಡುವಂತೆ ಸೂಚನೆ ನೀಡಿದ್ದರು. ಜಿಲ್ಲೆಯಲ್ಲಿ ಕೊರೊನಾದ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಸಂಡೆ ಬಜಾರ್ ಸ್ಥಗಿತಕ್ಕೆ ಆದೇಶ ನೀಡಿದ್ದರು.

ಆದರೆ, ಸಂಡೆ ಬಜಾರ್ ನಿರ್ವಾಹಕರು ಇದೀಗ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಭಾನುವಾರ ಯಥಾ ಪ್ರಕಾರ ಸಂಡೇ ಬಜಾರ್ ನಿರ್ವಹಿಸಿದರು. ಇದೀಗ ನಗರಸಭೆ ಹಾಗೂ ಪೊಲೀಸ್ ಇಲಾಖೆಗೆ ಸಂಡೆ ಬಜಾರ್ ಸವಾಲಾಗಿ ಪರಿಣಮಿಸಿದೆ.

ABOUT THE AUTHOR

...view details