ಗಂಗಾವತಿ:ಹೋಟೆಲ್ ಒಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಕೆಲಸ ಮುಗಿಸಿ ಫುಟ್ಪಾತ್ ಮೇಲೆ ನಡೆದುಕೊಂಡು ಮನೆಗೆ ಹಿಂತಿರುಗುತ್ತಿರುವ ಸಂದರ್ಭದಲ್ಲಿ ಆಕೆಯ ಮೇಲೆ ಕಬ್ಬಿನ ಟ್ರ್ಯಾಕ್ಟರ್ ಉರುಳಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ಲಿಂಗರಾಜಕ್ಯಾಂಪಿನ ಮುಮ್ತಾಜ್ಬೇಗಂ (36) ಎಂದು ಗುರುತಿಸಲಾಗಿದೆ. ಮಹಿಳೆ ರಾಣಿಚನ್ನಮ್ಮ ವೃತ್ತದಲ್ಲಿರುವ ಅನ್ನಪೂಣೇಶ್ವರಿ ಎಂಬ ಹೋಟೆಲ್ನಲ್ಲಿ ಸಂಜೆಯ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿರುವ ಈ ದುರ್ಘಟನೆ ನಡೆದಿದೆ.