ಕುಷ್ಟಗಿ: ಕಣ್ಣಿಗೆ ಮುಳ್ಳು ತಾಗಿ ದೃಷ್ಟಿ ಹೀನತೆ ಅನುಭವಿಸಿದ್ದ ಅನಾಥ ಬಾಲಕಿಗೆ ಸಕಾಲಿಕವಾಗಿ ನಡೆಸಿದ ಉಚಿತ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
ಮುಳ್ಳು ತಾಗಿ ದೃಷ್ಟಿ ನ್ಯೂನ್ಯತೆಗೆ ಒಳಗಾಗಿದ್ದ ಅನಾಥ ಬಾಲಕಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ - Successful treatment for a girl with visual impairment
ಕಣ್ಣಿಗೆ ಮುಳ್ಳು ತಾಗಿ ದೃಷ್ಟಿ ಹೀನತೆ ಅನುಭವಿಸುತ್ತಿದ್ದ ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದ ಅನಾಥೆ ಬಾಲಕಿಗೆ ಕಾಖಂಡಕಿ ಕಣ್ಣಾಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಕುರಿತು ಇನ್ನರ್ ವ್ಹೀಲ್ ಕ್ಲಬ್ ಅದ್ಯಕ್ಷೆ ಮೇಘಾ ದೇಸಾಯಿ, ನಿಕಟಪೂರ್ವ ಅದ್ಯಕ್ಷೆ ಡಾ. ಪಿ.ಎಂ. ಪಾರ್ವತಿ ಅವರು ಮಾತನಾಡಿ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದ ಅನಾಥೆ ಬಾಲಕಿ ಕಾವೇರಿಗೆ ಮುಳ್ಳು ತಾಗಿ ದೃಷ್ಟಿ ಮಂದ ಆಗಿತ್ತು. ಚಿಕಿತ್ಸೆಗೆ ಹಣವಿಲ್ಲದ ಕಾರಣಕ್ಕೆ ಚಿಕಿತ್ಸೆ ಮಾಡಿಸಿಕೊಂಡಿರಲಿಲ್ಲ. ಸಂಪೂರ್ಣ ದೃಷ್ಟಿ ಕಳೆದುಕೊಳ್ಳುವ ಅಪಾಯವಿತ್ತು.
ಇಲ್ಲಿನ ಕಾಖಂಡಕಿ ಕಣ್ಣಾಸ್ಪತ್ರೆಯಲ್ಲಿ ಡಾ. ಸುಶೀಲೇಂದ್ರ ಕಾಖಂಡಕಿ ಅವರು ಶಸ್ತ್ರಚಿಕಿತ್ಸೆಯನ್ನು ತಮ್ಮ ಕಣ್ಣಾಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಸಿದ್ದಾರೆ. ಅಲ್ಲದೇ ಮನೆಗಳಲ್ಲಿ ಪಾತ್ರೆ ತಿಕ್ಕಿ ಜೀವನ ನಡೆಸುವ ನಾಲ್ವರು ಹಿರಿಯ ನಾಗರಿಕರಿಗೂ ಕೊರೊನಾ ಮಾರ್ಗಸೂಚಿಯನ್ವಯ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು, ಯಶಸ್ವಿಯಾಗಿರುವುದು ಸಂತಸವಾಗಿದೆ ಅವರು ತಿಳಿಸಿದರು.