ಗಂಗಾವತಿ: ತಾಲೂಕಿನಜಬ್ಬಲಗುಡುದ ಸಮೀಪ ಕುಮಾರರಾಮನ ಕೋಟೆಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು, ವಿವಿಧ ಕಾಲೇಜಿನ ಸುಮಾರು 150 ಮಕ್ಕಳು ಪಾಲ್ಗೊಂಡು ಕೋಟೆಯಲ್ಲಿನ ಸ್ಮಾರಕಗಳನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿರಿಯರ ಆಸಕ್ತಿ, ಮಕ್ಕಳ ಶ್ರಮಕ್ಕೆ ಸ್ವಚ್ಛವಾಯ್ತು ಕುಮಾರರಾಮನ ಕೋಟೆ - latest cleaning work at kumararama fort
ಜಬ್ಬಲಗುಡುದ ಸಮೀಪ ಕುಮಾರರಾಮನ ಕೋಟೆಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದು, ವಿವಿಧ ಕಾಲೇಜಿನ ಸುಮಾರು 150 ಮಕ್ಕಳು ಪಾಲ್ಗೊಂಡು ಕೋಟೆಯಲ್ಲಿನ ಸ್ಮಾರಕಗಳನ್ನು ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
![ಹಿರಿಯರ ಆಸಕ್ತಿ, ಮಕ್ಕಳ ಶ್ರಮಕ್ಕೆ ಸ್ವಚ್ಛವಾಯ್ತು ಕುಮಾರರಾಮನ ಕೋಟೆ Successful cleaning work at Kumararama Fort](https://etvbharatimages.akamaized.net/etvbharat/prod-images/768-512-5256584-thumbnail-3x2-gangavati.jpg)
ಹಿರಿಯರ ಆಸಕ್ತಿ, ಮಕ್ಕಳ ಶ್ರಮಕ್ಕೆ ಕ್ಲೀನ್ ಆ್ಯಂಡ್ ಗ್ರೀನ್ ಆಯ್ತು ಕುಮಾರರಾಮನ ಕೋಟೆ
ಹಿರಿಯರ ಆಸಕ್ತಿ, ಮಕ್ಕಳ ಶ್ರಮಕ್ಕೆ ಸ್ವಚ್ಛವಾಯ್ತು ಕುಮಾರರಾಮನ ಕೋಟೆ
ಪಂಪಾ ನಗರದಲ್ಲಿರುವ ಸರೋಜಮ್ಮ ಪಿಯು ಕಾಲೇಜು, ಕಲ್ಮಠದ ಕೊಟ್ಟೂರೇಶ್ವರ ಸಂಯುಕ್ತ ಹಾಗೂ ಕೇಸರಹಟ್ಟಿಯ ಸರ್ಕಾರಿ ಕಾಲೇಜಿನ ಮಕ್ಕಳು ಪಾಲ್ಗೊಂಡು ಕುಮಾರರಾಮನ ಕಮ್ಮಟದುರ್ಗದ ಜೈನ ಮಂದಿರವನ್ನು ಸ್ವಚ್ಛಗೊಳಿಸಿದರು. ಇನ್ನು ಈ ಸ್ವಚ್ಛತಾ ಕಾರ್ಯಕ್ಕೆ ತಹಶೀಲ್ದಾರ್ ಚಂದ್ರಕಾಂತ್, ಉಪ ವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವುಡಿ, ತಾಲೂಕು ಪಂಚಾಯತ್ ಇಒ ಮೋಹನ್, ಡಿವೈಎಸ್ಪಿ ಚಂದ್ರಶೇಖರ, ವೈದ್ಯರಾದ ಶಿವಕುಮಾರ ಮಾಲಿ ಪಾಟೀಲ್, ವಿಜಯಗೌಡರ್ ಆಸಕ್ತಿಯಿಂದ ಪಾಲ್ಗೊಂಡು ಮಕ್ಕಳಿಗೆ ಪ್ರೋತ್ಸಾಹ ನೀಡಿದರು.