ಗಂಗಾವತಿ: ಕಾಶ್ಮೀರದಲ್ಲಿ ನಡೆದ ನೈಜ ಘಟನೆಗಳನ್ನು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ತೋರಿಸಲಾಗಿದ್ದು, ಭಾರತದ ಸಮಗ್ರ ಇತಿಹಾಸ ಅರಿಯಲು ಪ್ರತಿಯೊಬ್ಬರು ಚಿತ್ರ ವೀಕ್ಷಣೆ ಮಾಡಬೇಕು ಎಂದು ಮಂತ್ರಾಲಯದ ಸುಬುಧೇಂದ್ರ ಶ್ರೀಗಳು ಹೇಳಿದರು.
ನಗರದ ಕನಕ ದುರ್ಗ ಚಿತ್ರಮಂದಿರದಲ್ಲಿ ಭಕ್ತಗಣದೊಂದಿಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಪಂಡಿತರು ಅನುಭವಿಸಿದ ನೈಜ ಚಿತ್ರಣವನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ನಮ್ಮ ದೇಶದ ಶಿರೋಭಾಗ ಉಳಿಸಿಕೊಳ್ಳಲು ಎಲ್ಲರೂ ಈ ಚಿತ್ರ ನೋಡಲೇಬೇಕು ಎಂದು ಕರೆ ಕೊಟ್ಟರು.