ಕೊಪ್ಪಳ:ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಯೋಧನನ್ನು ಜನರು ತಮ್ಮ ಇಡೀ ಗ್ರಾಮದ ತುಂಬ ಅದ್ಧೂರಿ ಮೆರವಣಿಗೆ ಮಾಡಿದ್ದಾರೆ.
17 ವರ್ಷದ ಸೇವೆ ಬಳಿಕ ನಿವೃತ್ತಿ.. ಊರ ತುಂಬಾ ಯೋಧನ ಮೆರವಣಿಗೆ ಮಾಡಿ ಅಭಿಮಾನಪಟ್ಟ ಜನರು - undefined
ಕುದರಿಮೋತಿ ಗ್ರಾಮದ ಯೋಧ ಗವಿಸಿದ್ದಪ್ಪ ದೊಡ್ಡಮನಿ ಅವರು ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದಾರೆ. ಸೇವಾ ನಿವೃತ್ತಿ ಹೊಂದಿ ನಿನ್ನೆ ಸಂಜೆ ಸ್ವಗ್ರಾಮಕ್ಕೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರುಬಾಜಾ ಭಜಂತ್ರಿ, ಕಳಸದೊಂದಿಗೆ ಬಂದು ಸ್ವಾಗತಿಸಿದ್ದಾರೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮದ ಯೋಧ ಗವಿಸಿದ್ದಪ್ಪ ದೊಡ್ಡಮನಿ ಅವರು ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದಾರೆ. ಸೇವಾ ನಿವೃತ್ತಿ ಹೊಂದಿ ನಿನ್ನೆ ಸಂಜೆ ಸ್ವಗ್ರಾಮಕ್ಕೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಬಾಜಾ ಭಜಂತ್ರಿ, ಕಳಸದೊಂದಿಗೆ ಬಂದು ಸ್ವಾಗತಿಸಿದ್ದಾರೆ. ಅಲ್ಲದೆ, ಸುಮಾರು 1 ಕಿ.ಮೀ.ವರೆಗೆ ಯೋಧನನ್ನು ವಾಹನದಲ್ಲಿ ಮೆರವಣಿಗೆ ಮಾಡಿದ್ದಾರೆ.
ಅಲ್ಲದೆ ತ್ರಿವರ್ಣ ಧ್ವಜದೊಂದಿಗೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯೊಂದಿಗೆ ಯೋಧನನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಯೋಧ ಗವಿಸಿದ್ದಪ್ಪ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಿ ಸಂಭ್ರಮಿಸಿದರು. ಗ್ರಾಮಸ್ಥರ ಈ ಪ್ರೀತಿಯನ್ನು ಕಂಡು ಯೋಧ ಗ್ರಾಮಸ್ಥರಿಗೆ ಕೃತಜ್ಞತೆ ಅರ್ಪಿಸಿದರು.