ಗಂಗಾವತಿ: ಈಗಾಗಲೇ ಪದವಿ ಹಂತದ ತರಗತಿಗಳು ಆರಂಭವಾಗಿ ಎರಡು ವಾರ ಕಳೆಯುತ್ತಾ ಬಂದಿದೆ. ಆದರೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಕಾಲಕ್ಕೆ ಪುಸ್ತಕಗಳು ಸಿಗದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ತರಗತಿ ಆರಂಭವಾದರೂ ಸಿಗದ ಪುಸ್ತಕ: ವಿದ್ಯಾರ್ಥಿಗಳ ಪರದಾಟ - ಗಂಗಾವತಿ
ಮಧ್ಯಾಹ್ನ 12 ಗಂಟೆಯಿಂದ ಸಂಜೆ 3 ಗಂಟೆವರೆಗೂ ಗ್ರಂಥಾಲಯದ ಮುಂದೆ ಸರದಿ ಸಾಲಲ್ಲಿ ನಿಂತರೂ ಪುಸ್ತಕ ಸಿಕ್ಕಿಲ್ಲ ಎಂದು ಎಸ್ಎಫ್ಐ ಸಂಘಟನೆಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಬೆಳಗ್ಗೆ ತರಗತಿಗಳನ್ನು ಮುಗಿಸಿಕೊಂಡು ನೂರಾರು ವಿದ್ಯಾರ್ಥಿಗಳು ಮಧ್ಯಾಹ್ನ 12 ಗಂಟೆಯಿಂದ ಸಂಜೆ 3 ಗಂಟೆವರೆಗೂ ಗ್ರಂಥಾಲಯದ ಮುಂದೆ ಸರದಿ ಸಾಲಲ್ಲಿ ನಿಂತರೂ ಪುಸ್ತಕ ಸಿಕ್ಕಿಲ್ಲ ಎಂದು ಎಸ್ಎಫ್ಐ ಸಂಘಟನೆಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕಾಲೇಜಿನ ಮುಖ್ಯಸ್ಥರು ಮಕ್ಕಳಿಗೆ ಪುಸ್ತಕ ಕೊಡಿಸುವಲ್ಲಿ ನಿಯಮ ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ವಿದ್ಯಾರ್ಥಿಗಳಾದ ಬಸವರಾಜ, ಶರಣಪ್ಪ, ಮಲ್ಲೇಶ ಆರೋಪಿಸಿದ್ದಾರೆ.
ಪ್ರತೀ ವರ್ಷ ಕಾಲೇಜು ಆರಂಭವಾದ ಸಂದರ್ಭದಲ್ಲಿ ಈ ಸಮಸ್ಯೆ ನಿರ್ಮಾಣವಾಗುತ್ತದೆ. ಕಾಲೇಜಿನ ಆಡಳಿತ ಮಂಡಳಿ ಸರಿಯಾದ ನಿಯಮ ರೂಪಿಸುವಲ್ಲಿ ವಿಫಲವಾಗಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.