ಗಂಗಾವತಿ: ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಿಟ್ಟು ಗ್ರಾಮೀಣ ಭಾಗದಲ್ಲಿ ಭಾರಿ ವಾಹನಗಳು ಓಡಾಡುತ್ತಿರುವುದನ್ನು ಕೂಡಲೇ ತಡೆ ಹಿಡಿಯಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಭಾರಿ ವಾಹನಗಳ ಓಡಾಟ ವಿರೋಧಿಸಿ ಸ್ಥಳೀಯರು, ವಿದ್ಯಾರ್ಥಿಗಳಿಂದ ರಸ್ತೆ ತಡೆ - ವಿರುಪಾಪುರ ತಾಂಡ
ರಾಯಚೂರು, ಕಲಬುರಗಿ, ಹೈದರಾಬಾದ್ನಿಂದ ಬರುವ ಭಾರಿ ವಾಹನ, ಟ್ರಕ್, ಸರಕು ವಾಹನಗಳು ಹೊಸಪೇಟೆಗೆ ತಲುಪಲು ಬೇರೆ ಮಾರ್ಗವಿದ್ದರೂ ಟೋಲ್ ಗೇಟ್ ಶುಲ್ಕ ತಪ್ಪಿಸಿಕೊಳ್ಳಲು ಗ್ರಾಮೀಣ ಭಾಗದ ರಸ್ಯೆಯಲ್ಲಿ ಓಡಾಡುತ್ತಿರುವುದಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಆನೆಗೊಂದಿ ರಸ್ತೆಯಲ್ಲಿ ಬರುವ ವಿರುಪಾಪುರದ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಸೇವಾಲಾಲ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಭಾರಿ ವಾಹನಗಳು ಓಡಾಡುವುದರಿಂದ ರಸ್ತೆ ಹಾಳಾಗಿದ್ದು, ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ. ದುರಸ್ತಿಗೂ ಅಧಿಕಾರಿಗಳು ಮುಂದಾಗಿಲ್ಲ ಎಂದು ಆರೋಪಿಸಿದರು.
ರಾಯಚೂರು, ಕಲಬುರಗಿ, ಹೈದರಾಬಾದ್ನಿಂದ ಬರುವ ಭಾರಿ ವಾಹನ, ಟ್ರಕ್, ಸರಕು ವಾಹನಗಳು ಹೊಸಪೇಟೆಗೆ ತಲುಪಲು ಬೇರೆ ಮಾರ್ಗವಿದ್ದರೂ ಟೋಲ್ ಗೇಟ್ ಶುಲ್ಕ ತಪ್ಪಿಸಿಕೊಳ್ಳಲು ಈ ಮಾರ್ಗದಿಂದ ಓಡಾಡುತ್ತಿವೆ. ಹೀಗಾಗಿ ರಸ್ತೆ ಹಾಳಾಗುತ್ತಿದೆ. ಕೂಡಲೇ ಭಾರಿ ಗಾತ್ರದ ವಾಹನಗಳನ್ನು ಬೇರೆ ಮಾರ್ಗದ ಮೂಲಕ ಓಡಾಡುವಂತೆ ಪೊಲೀಸರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಧರಣಿನಿರತರು ಒತ್ತಾಯಿಸಿದರು. ರಸ್ತೆ ತಡೆಯಿಂದಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೂರಾರು ವಾಹನಗಳ ಓಡಾಟ ಸ್ಥಗಿತವಾಗಿತ್ತು.